ಸಾಂದರ್ಭಿಕ ಚಿತ್ರ 
ರಾಜ್ಯ

ಕುಖ್ಯಾತ ಮೂವರು ಮನೆಗಳ್ಳರ ಬಂಧನ: 2.12 ಕೋಟಿ ರೂ. ಮೌಲ್ಯದ ಬೆಳ್ಳಿ, ಚಿನ್ನಾಭರಣ ವಶ

ಬೆಂಗಳೂರಿನ ಪೊಲೀಸರು ಕುಖ್ಯಾತ ಮೂವರು ಮನೆಗಳ್ಳರನ್ನು  ಬಂಧಿಸಿ ಸುಮಾರು 2.12 ಕೋಟಿ ರೂ. ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣಗಳ ವಶಪಡಿಸಿಕೊಂಡಿದ್ದಾರೆ‌.

ಬೆಂಗಳೂರು: ಬೆಂಗಳೂರಿನ ಪೊಲೀಸರು ಕುಖ್ಯಾತ ಮೂವರು ಮನೆಗಳ್ಳರನ್ನು  ಬಂಧಿಸಿ ಸುಮಾರು 2.12 ಕೋಟಿ ರೂ. ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣಗಳ ವಶಪಡಿಸಿಕೊಂಡಿದ್ದಾರೆ‌.

ಚಿಕ್ಕಮಗಳೂರು ಮೂಲದ ಮಹಮ್ಮದ್ ತೌಫೀಕ್,  ಬಳ್ಳಾರಿ ಮೂಲದ  ಶೇಖ್ ಷಾ ವಾಲಿ (34) ಒರಿಸ್ಸಾ ಮೂಲದ ಲಂಭೋಧರ (22) ಬಂಧಿತ ಆರೋಪಿಗಳು.

ಮಹಮ್ಮದ್ ತೌಫೀಕ್ ಬೆಂಗಳೂರು ನಗರದ ವಿವಿಧ ಕಡೆ ಸೇರಿ ನೆಲಮಂಗಲ, ತುಮಕೂರು, ಚಿಕ್ಕಮಗಳೂರು ಹಾಗೂ ಹಲವು ಕಡೆಗಳಲ್ಲಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ವಿವೇಕ ನಗರ ಪೊಲೀಸರು ಮನೆ ಕಳ್ಳತನ ಮಾಡುತ್ತಿದ್ದ ಬಳ್ಳಾರಿ ಮೂಲದ  ಶೇಖ್ ಷಾ ವಾಲಿಯನ್ನು ಬಂಧಿಸಿ, ಆತನಿಂದ  ಸುಮಾರು 17 ಲಕ್ಷ ಬೆಲೆ ಬಾಳುವ 355 ಗ್ರಾಂ. ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕಾರ್ಯನಿರ್ವಹಿಸುತ್ತಿದ್ದ ಚಿನ್ನಾಭರಣ ಅಂಗಡಿಯಲ್ಲೇ ಕಂಪ್ಯೂಟರ್ ದಾಖಲೆ ತಿದ್ದಿ, ಚಿನ್ನ ಕಳ್ಳತನ ಮಾಡುತ್ತಿದ್ದ ಒರಿಸ್ಸಾ ಮೂಲದ ಲಂಭೋಧರನನ್ನು ಬಂಧಿಸಿ, ಆತನಿಂದ  1 ಕೋಟಿ ರೂ. ಮೌಲ್ಯದ 1.5 ಕೆ.ಜಿ. ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ  ಬೆಂಗಳೂರು ನಗರದ ಕಬ್ಬನ್ ಪಾರ್ಕ್  ಠಾಣಾ ಸರಹದ್ದಿನ  ಎಂ.ಜಿ.ರಸ್ತೆಯ ನವರತನ್ ಜುವೆಲ್ಲರಿ ಅಂಗಡಿಯಲ್ಲಿ  ಕಂಪ್ಯೂಟರ್ ಆಪರೇಟರ್ ಆಗಿದ್ದು, ಅಂಗಡಿಯ ಮಾಲೀಕರಿಗೆ ಗೊತ್ತಾಗದಂತೆ ಕಂಪ್ಯೂಟರ್‌ನಲ್ಲಿ ಚಿನ್ನದ ದಾಖಲೆಗಳನ್ನು ತಿದ್ದಿ, ಮಾಲೀಕರನ್ನು ಮೋಸ ಮಾಡಿ ಚಿನ್ನ ಕಳ್ಳತನ ಮಾಡಿಕೊಂಡು ಒರಿಸ್ಸಾ ರಾಜ್ಯಕ್ಕೆ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT