ರಾಜ್ಯ

ಮುಖ್ಯ ನ್ಯಾಯಮೂರ್ತಿಗಳು, ಹಿರಿಯ ಅಡ್ವೊಕೇಟ್ ಭೇಟಿ ಮಾಡಿದ್ದಕ್ಕೆ ಬಿನೀಶ್ ಕೊಡಿಯೇರಿ ಪರ ವಕೀಲರ ಕ್ಷಮಾಪಣೆ

Sumana Upadhyaya

ಬೆಂಗಳೂರು: ಡ್ರಗ್ ದಂಧೆಯಲ್ಲಿ ಹಣ ಹೂಡಿಕೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ಬಂಧನದಲ್ಲಿರುವ ಬಿನೀಶ್ ಕೊಡಿಯಾರಿ ಪರ ಹಿರಿಯ ವಕೀಲರು ಕರ್ನಾಟಕ ಹೈಕೋರ್ಟ್ ಮುಂದೆ ಕ್ಷಮೆ ಕೇಳಿದ್ದಾರೆ.

ಅರ್ಜಿ ಸಲ್ಲಿಕೆಗೆ ಮೊದಲೇ ಅಡ್ವೊಕೇಟ್ ಅವರು ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಮತ್ತು ಅತ್ಯಂತ ಹಿರಿಯ ವಕೀಲರ ನಿವಾಸಕ್ಕೆ ಭೇಟಿ ನೀಡಿದ್ದಕ್ಕೆ ಸಂಬಂಧಪಟ್ಟಂತೆ ಕ್ಷಮೆ ಕೇಳಿದ್ದಾರೆ.

ಆರೋಪಿಯನ್ನು ಭೇಟಿ ಮಾಡಲು ವಕೀಲರಿಗೆ ಅವಕಾಶ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಆದೇಶ ನೀಡುವಂತೆ ಕೋರಲು ಅಡ್ವೊಕೇಟ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು. ಬಿನೀಶ್ ಅರ್ಜಿ ಸಲ್ಲಿಕೆ ವಿಚಾರಣೆ ನಡೆಸುತ್ತಿದ್ದ ವೇಳೆ ನಿನ್ನೆ ಜಸ್ಟೀಸ್ ಸೂರಜ್ ಗೋವಿಂದರಾಜ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಆಕ್ಷೇಪ ವ್ಯಕ್ತಪಡಿಸಿದರು. ಆಗ ಹಿರಿಯ ವಕೀಲರು ತಮ್ಮ ನಡೆ ತಪ್ಪಾಗಿದೆ ಎಂದು ಕ್ಷಮೆ ಕೇಳಿದರು. ಬಿನೀಶ್ ಕೇರಳದ ಸಿಪಿಎಂ ಕಾರ್ಯದರ್ಶಿ ಕೊಡಿಯಾರಿ ಬಾಲಕೃಷ್ಣನ್ ಅವರ ಪುತ್ರ.

SCROLL FOR NEXT