ರಾಜ್ಯ

ಬೆಂಗಳೂರು: 1.20 ಕೋಟಿ ರೂ. ಮೌಲ್ಯದ ಡ್ರಗ್ಸ್, 230 ಗ್ರಾಂ ಗಾಂಜಾ ಜಪ್ತಿ

Lingaraj Badiger

ಬೆಂಗಳೂರು:‌ ವಿದೇಶದಿಂದ ನಗರಕ್ಕೆ ಸರಬರಾಜಾಗಿದ್ದ ಎರಡು ಗಾಂಜಾ ಪ್ರಕರಣಗಳನ್ನು ಭೇದಿಸುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಗುರುವಾ ಯಶಸ್ವಿಯಾಗಿದ್ದಾರೆ.

ವಿದೇಶಿ ಅಂಚೆ ಕಚೇರಿಯಲ್ಲಿ ಅಂದಾಜು ರೂ. 1.20 ಕೋಟಿ ರೂ. ಮೌಲ್ಯದ 2.345 ಕೆಜಿ ಎಂಡಿಎಂಎ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

"ಫೂಟ್ ಮಸಾಜರ್" ಒಳಗೆ ಎಂಡಿಎಂ ಪತ್ತೆ ಯಾಗಿದ್ದು, ಇದನ್ನು ಫ್ರಾನ್ಸ್‌ನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಆಟಿಕೆ ಸಾಮಾನುಗಳಲ್ಲಿ ಸರಬರಾಜು ಆಗಿದ್ದ 230 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಕೆಲವರು, ಅಂತರರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಮೂಲಕ ಅಂಚೆಯಲ್ಲಿ ನಗರಕ್ಕೆ ಡ್ರಗ್ಸ್ ತರಿಸುತ್ತಿದ್ದರೆಂಬ ಮಾಹಿತಿ ಇದೆ. ಪಾರ್ಸೆಲ್ ಮೇಲಿರುವ ವಿಳಾಸ ಆಧರಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT