ರಾಜ್ಯ

ಗೂಡ್ಸ್ ವಾಹನ- ಬೈಕ್ ಮುಖಾಮುಖಿ ಡಿಕ್ಕಿ: ಮೂವರ ದಾರುಣ ಸಾವು

Manjula VN

ಚಾಮರಾಜನಗರ: ಗೂಡ್ಸ್ ವಾಹನ, ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಕೊಳ್ಳೆಗಾಲ ತಾಲೂಕಿನ ಧನಗೆರೆ-ಸತ್ತೇಗಾಲ ಮುಖ್ಯರಸ್ತೆಯಲ್ಲಿ ಸಂಭವಿಸಿದೆ.

ಮೃತರನ್ನು ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಪಳನಿಮೇಡು ಗ್ರಾಮದ ಡೇವಿಡ್, ಸೇತು, ಶೇಷುರಾಜ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಕೊಳ್ಳೇಗಾಲದಿಂದ ಮಳವಳ್ಳಿ ಕಡೆಗೆ ಬೈಕ್ನಲ್ಲಿ ಮೂವರು ಹೋಗುತ್ತಿದ್ದಾಗ, ಈ ವೇಳೆ ಮಳವಳ್ಳಿಯಿಂದ ಕೊಳ್ಳೇಗಾಲ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

SCROLL FOR NEXT