ರಾಜ್ಯ

ನ.23ರಿಂದ 'ಸಂವೇದ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮ' 

Sumana Upadhyaya

ಬೆಂಗಳೂರು:ಕೊರೋನಾ ವೈರಸ್ ನಿಂದ ಶಾಲೆಗಳು ಆರಂಭವಾಗದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 5,6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನವೆಂಬರ್ 23ರಿಂದ ದೂರದರ್ಶನ ಚಂದನದಲ್ಲಿ ಸಂವೇದ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮವನ್ನು ಆರಂಭಿಸಲಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8 ಗಂಟೆಯಿಂದ 9.30ರವರೆಗೆ, ಸಾಯಂಕಾಲ 5.30ರಿಂದ 6 ಗಂಟೆಯವರೆಗೆ ಪ್ರತಿದಿನ 4 ಪಾಠಗಳನ್ನು ಪ್ರತಿ ವಿಷಯ 30 ನಿಮಿಷಗಳವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 5,6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ತರಗತಿಗಳ ವಿಡಿಯೊ ಪಾಠಗಳನ್ನು ಮಾಡಲಾಗುತ್ತದೆ.

SCROLL FOR NEXT