ರಾಜ್ಯ

ಕೆಎಸ್ ಟಿ ಡಿಸಿ ಸೇವೆಗಳು ವಿಸ್ತರಣೆ!

Srinivas Rao BV

ಬೆಂಗಳೂರು: ಕೊರೋನೋತ್ತರ ಅನ್ ಲಾಕ್ 5.0 ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಪ್ರವಾಸಿಗರಿಗೆ ತೆರೆದುಕೊಂಡಿದ್ದು, ಸೇವೆಗಳನ್ನು ಒದಗಿಸುವ ಖಾಸಗಿ ಉದ್ಯಮಗಳು ನೆಲ ಕಚ್ಚುತ್ತಿದ್ದರೆ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ತನ್ನ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಕೆಲಸದಲ್ಲಿ ನಿರತವಾಗಿದೆ.

ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಕೆಎಸ್ ಟಿ ಡಿಸಿ ರಾಜ್ಯಾದ್ಯಂತ ಹಲವು ಬಜೆಟ್ ಹೊಟೇಲ್ ಗಳನ್ನು ಪ್ರಾರಂಭಿಸಿದ್ದು, ಆಲಮಟ್ಟಿ (21 ರೂಮ್ ಗಳು) ವಿಜಯಪುರ (21 ರೂಮ್) ಬರಚುಕ್ಕಿ (11 ರೂಮ್) ಬಿಆರ್ ಹಿಲ್ಸ್ (16) ಹಾಗೂ ತುಂಗ ಭದ್ರಾ ಅಣೆಕಟ್ಟೆ (20 ರೂಮ್) ಗಳ ವ್ಯವಸ್ಥೆಯನ್ನು ಪ್ರವಾಸಿಗರಿಗೆ ಹೊಸದಾಗಿ ಪ್ರಾರಂಭಿಸಿದೆ. ನವದೆಹಲಿಯಲ್ಲಿ ಕರ್ನಾಟಕ ಭವನ-3 ರಲ್ಲಿ 34 ರೂಮ್ ಗಳನ್ನೂ ಸಹ ಹೊಸದಾಗಿ ಕೆಎಸ್ ಟಿ ಡಿಸಿ ಪ್ರಾರಂಭಿಸಿದೆ. ಒಟ್ಟಾರೆ ದೇಶಾದ್ಯಂತ ಕೆಎಸ್ ಟಿಡಿಸಿ 122 ರೂಮ್ ಗಳನ್ನು ಹೊಸದಾಗಿ ಪ್ರವಾಸಿಗರಿಗಾಗಿ ಪ್ರಾರಂಭಿಸಿದೆ.

ಕೆಎಸ್ ಟಿ ಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಈ ಬಗ್ಗೆ ಮಾತನಾಡಿದ್ದು, ಹೊಸ ಸೇವೆಗಳು ಪ್ರವಾಸೋದ್ಯಮದ ನೀತಿಯ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಕೋಠಡಿಗಳಿಗೆ ತೆಗೆದುಕೊಳ್ಳಲಾಗುವ ಶುಲ್ಕ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ಬದಲಾವಣೆಯಾಗುತ್ತಿರುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಬಳಕೆಯಾಗದೇ ಉಳಿದಿರುವ ಸರ್ಕಾರಿ ಅತಿಥಿ ಗೃಹಗಳನ್ನೂ ಸಹ ಪ್ರವಾಸೋದ್ಯಮ ನಿಗಮ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುವುದಕ್ಕೆ ಚಿಂತನೆ ನಡೆಸುತ್ತಿದೆ. ಈ ಮೂಲಕ ಪ್ರವಾಸಿಗರು ಯಾವುದೇ ಆತಂಕವಿಲ್ಲದೇ ಪ್ರವಾಸ ಮಾಡುವ ವಾತಾವರಣ ನಿರ್ಮಿಸುವುವುದು ಉದ್ದೇಶವಾಗಿದೆ. 

ಉದ್ಯಮದ ದೃಷ್ಟಿಯಿಂದ ಇದು ವಿಸ್ತರಣೆಗೆ ಇರುವ ಅತ್ಯುತ್ತಮ ಅವಧಿ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT