ರಾಜ್ಯ

ಮೇಲುಕೋಟೆಯಲ್ಲಿ ಹರಕೆ ತೀರಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

Lingaraj Badiger

ಬೆಂಗಳೂರು: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.
 
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 19 ರಲ್ಲಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಚೆಲುವನಾರಾಯಣ ಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.
 
ಮೇಲುಕೋಟೆಗೆ ಆಗಮಿಸಿದ ಮುಖ್ಯಮಂತ್ರಿ ಅವರಿಗೆ ಪೊಲೀಸರಿಂದ ಗೌರವ ವಂದನೆ ನೀಡಲಾಯಿತು. ಮೇಲುಕೋಟೆ ಜೀಯರ್ ಮಠದ ಮುಂದೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸ್ವಾಗತಿಸಿದರು.
 
ಬಹುಮತಕ್ಕೆ ಅಗತ್ಯವಿದ್ದಷ್ಟು ಸ್ಥಾನಗಳನ್ನು ಗೆಲ್ಲಿಸಿಕೊಡುವಂತೆ ಶಿವರಾಜ್ ಸಿಂಗ್ ಹರಕೆ ಕಟ್ಟಿಕೊಂಡಿದ್ದರು. ಹರಕೆ ಕೋರಿಕೆ ಈಡೇರಿದ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಚಲುವನಾರಾಯಣಸ್ವಾಮಿ ದರ್ಶನ ಮಾಡಿದರು.
 
ಈ ಹಿಂದೆಯೂ ಎರಡು ಬಾರಿ ಮೇಲುಕೋಟೆಗೆ ಬಂದಿದ್ದ ಚೌಹಾಣ್ ಕಳೆದ ವರ್ಷ ನವೆಂಬರ್ ನಲ್ಲಿ ಆಗಮಿಸಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹರಕೆ ಹೊತ್ತುಕೊಂಡಿದ್ದರು. ಬಳಿಕ ಕೆಲವೇ ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದರು.
 
ಜೂನ್ 26ರಂದು 2ನೇ ಸಲ ಬಂದು ಹರಕೆ ತೀರಿಸಿ, ಹೊಸ ಹರಕೆ ಹೊತ್ತು ಕೊಂಡಿದ್ದರು. ಮೂರನೇ ಬಾರಿಗೆ ಭೇಟಿ ನೀಡಿದ ಚೌಹಾಣ್ ಮೊದಲು ಜೀಯರ್ ಮಠಕ್ಕೆ ಭೇಟಿ. ನಂತರ ಚಲುವನಾರಾಯಣ ಸ್ವಾಮಿ, ಬೆಟ್ಟದ ಯೋಗ ನರಸಿಂಹಸ್ವಾಮಿ ದೇವರುಗಳ ದರ್ಶನ ಮಾಡಿದರು.

SCROLL FOR NEXT