ರಾಜ್ಯ

ನ್ಯಾಯದಾನದಲ್ಲಿ ವಿಳಂಬ, ಜನರಲ್ಲಿ ಅಸಮಾಧಾನ: ಶೀಘ್ರ ವಿಲೇವಾರಿಗೆ ರೇರಾ-ಕೆ ಮುಂದು 

Sumana Upadhyaya

ಬೆಂಗಳೂರು: ಆನ್ ಲೈನ್ ನಲ್ಲಿ ಪ್ರಕರಣಗಳ ವಿವರಗಳನ್ನು ಪಡೆಯಲು ಸಮಯ ತೆಗೆದುಕೊಳ್ಳುತ್ತಿರುವುದರ ಮಧ್ಯೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ-ಕೆ)ದಿಂದ ನ್ಯಾಯದಾನ ವಿಳಂಬವಾಗುತ್ತಿರುವುದರಿಂದ ಗೃಹ ಖರೀದಿದಾರರಿಗೆ ನ್ಯಾಯ ಸಿಗುವುದು ವಿಳಂಬವಾಗುತ್ತಿದೆ. 

ಮನೆ ಖರೀದಿಸಿರುವವರು ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದಾಗ ಸಂಬಂಧಪಟ್ಟ ರಿಯಲ್ಟರ್ ಗಳನ್ನು ಶಿಕ್ಷೆಗೆ ಗುರಿಪಡಿಸಲು ಅಸಮರ್ಥ ತೋರಿಸುತ್ತಾರೆ. ಕಳೆದ ನವೆಂಬರ್ 6ರವರೆಗೆ ತೆಗೆದುಕೊಂಡರೆ ರೇರಾ ಪ್ರಧಾನ ಕಾರ್ಯದರ್ಶಿ ಎಂ ಎಸ್ ಶಂಕರ್, ಪ್ರಾಧಿಕಾರಕ್ಕೆ ಬಂದ 4 ಸಾವಿರದ 450 ದೂರುಗಳಲ್ಲಿ 2,310 ದೂರುಗಳನ್ನು ಆಲಿಸಿ ನ್ಯಾಯ ವಿಲೇವಾರಿ ಮಾಡಲಾಗಿದೆ ಎಂದರು.

ಯೋಜನೆಗಳ ನಿರ್ಮಾಣ ವಿಳಂಬಕ್ಕಾಗಿ ಡೆವಲಪರ್‌ಗಳು ಪಾವತಿಸಬೇಕಾದ ಪರಿಹಾರಕ್ಕೆ ಸಂಬಂಧಿಸಿದ ಸುಮಾರು ಶೇಕಡಾ 90ರಷ್ಟು ಪ್ರಕರಣಗಳಾಗಿವೆ. ಶೀಘ್ರ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ರೇರಾ ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 3 ರಂದು ರೇರಾ-ಕೆ ಹೊರಡಿಸಿದ ಆದೇಶದಲ್ಲಿ, ಬಿಲ್ಡರ್‌ಗಳು ಪಾವತಿಸಬೇಕಾದ ದಂಡವನ್ನು ಮರುಪಡೆಯುವಲ್ಲಿ ಜಿಲ್ಲಾಧಿಕಾರಿ ಭಾಗಿಯಾಗುತ್ತಾರೆ, 

ಪ್ರಾಧಿಕಾರ ಬಿಲ್ಡರ್ ಮತ್ತು ಗೃಹ ಖರೀದಿ ಮಾಡಿರುವವರಿಗೆ ನಿಯಂತ್ರಣ ಪ್ರಾಧಿಕಾರ ನೊಟೀಸ್ ಕಳುಹಿಸುತ್ತದೆ. ರೇರಾ ಕಾರ್ಯದರ್ಶಿ ಕೆ ಎಸ್ ಲತಾ ಕುಮಾರಿ, ರೇರಾ ಕೋರ್ಟ್ ಮುಂದೆ ಸುಮಾರು 2,500 ಕೇಸುಗಳು ಬಾಕಿ ಇವೆ. ಶೇಕಡಾ 60ಕ್ಕಿಂತ ಹೆಚ್ಚು ವಿಲೇವಾರಿ ಆಗಿದೆ ಎಂದರು. 

ಎಲ್ಲವನ್ನೂ ಆನ್‌ಲೈನ್ ಮಾಡಲು ನಾವು ಹೊರಟಿದ್ದೇವೆ. ಭವಿಷ್ಯದಲ್ಲಿ ಪ್ರತಿ ದೂರಿನ ವಿವರಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದು. ”ಪ್ರಕರಣಗಳ ಪರಿಹಾರವನ್ನು ವೇಗಗೊಳಿಸಲು, ಇತ್ತೀಚಿನ ಅಧಿಸೂಚನೆಯ ಮೂಲಕ ಅಸ್ತಿತ್ವದಲ್ಲಿರುವ ಮೂರು ಸದಸ್ಯರ ಪ್ರಾಧಿಕಾರದ ಜೊತೆಗೆ ನಾಲ್ಕು ಹೆಚ್ಚುವರಿ ನ್ಯಾಯಪೀಠಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಲತಾ ಕುಮಾರಿ ತಿಳಿಸಿದ್ದಾರೆ. "ಪಕ್ಷಪಾತದ ಯಾವುದೇ ದೂರನ್ನು ತಪ್ಪಿಸಲು ಪ್ರತಿ ನ್ಯಾಯಪೀಠಕ್ಕೆ ನಿಗದಿಪಡಿಸಿದ ಪ್ರಕರಣಗಳನ್ನು ಆನ್‌ಲೈನ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಅವರು ಹೇಳಿದರು.

SCROLL FOR NEXT