ರಾಜ್ಯ

ಮರ ಕಡಿಯಲು ಅನುಮತಿಯ ವಿವರಗಳನ್ನು ವೆಬ್ ಸೈಟ್ ನಲ್ಲಿ ಹಾಕಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

Nagaraja AB

ಬೆಂಗಳೂರು: ಪಾರದರ್ಶಕತೆ ಖಚಿತತೆಗಾಗಿ ಮರಗಳನ್ನು ಕಡಿಯಲು ಅಥವಾ ಸ್ಥಳಾಂತರ ಮಾಡಲು ನೀಡಲಾಗಿರುವ ಅನುಮತಿಯ ವಿವರಗಳನ್ನು ತನ್ನ ವೆಬ್ ಸೈಟ್ ನಲ್ಲಿ ಅಳವಡಿಸುವಂತೆ ಹೈಕೋರ್ಟ್, ಬಿಬಿಎಂಪಿಗೆ ಸೂಚಿಸಿದೆ.

ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳನ್ನು ಜಾರಿಗೆ ತರಲು ನಿರ್ದೇಶನ ಕೋರುವಂತೆ ದತ್ತಾತ್ರೇಯ ಟಿ ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿದೆ.

ಬಿಎಂಆರ್ ಸಿಎಲ್ ಯೋಜನೆಗಾಗಿ  ಮರಗಳನ್ನು ಕಡಿಯಲು  ಅಧಿಕಾರಿಯೊಬ್ಬರು ನೀಡಿದ ಅನುಮತಿಯನ್ನು ಪರಿಶೀಲಿಸುವಾಗ ಅನುಮತಿಯ ವಿವರಗಳು ಮತ್ತು ಪರವಾನಗಿ ಕೋರಿರುವ ಅರ್ಜಿಯನ್ನು ತಕ್ಷಣವೇ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.

ಯಾವಾದದರೂ ಇದ್ದರೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಸಾರ್ವಜನಿಕ ಪ್ರಕಟಣೆಯನ್ನು ಅಧಿಕಾರಿ ಖಚಿತಪಡಿಸಿಕೊಳ್ಳಬೇಕು, 
ಮರಗಳನ್ನು ಕಡಿಯಲು ಅನುಮತಿ ನೀಡುವ ಮೊದಲು, ಅಧಿಕಾರಿ ಸಂಪೂರ್ಣ ಕಾರ್ಯವಿಧಾನವನ್ನು ಅನುಸರಿಸಲು ಸಿದ್ಧರಿದ್ದೀರಾ ಎಂದು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಈ ಮಧ್ಯೆ, ಯೋಜನೆಯನ್ನು ಕಾರ್ಯಗತಗೊಳಿಸಲು ವಿಳಂಬವಾಗುವುದರಿಂದ ದಿನಕ್ಕೆ 85 ಲಕ್ಷ ರೂ, ತಿಂಗಳಿಗೆ ಅಂದಾಜು 20 ಕೋಟಿ ರೂ. ನಷ್ಟವನ್ನು ಭರಿಸಬೇಕಿದೆ. ಅಂತಿಮವಾಗಿ ಇದು ಸಾರ್ವಜನಿಕ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಬಿಎಂಆರ್ ಸಿಎಲ್  ವಕೀಲರು ಹೇಳಿದರು. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 23ಕ್ಕೆ ಮುಂದೂಡಿದೆ.

SCROLL FOR NEXT