ರಾಜ್ಯ

ಬೆಂಗಳೂರು: ಕಳ್ಳತನವಾಗಿದ್ದ ದ್ವಿಚಕ್ರ ವಾಹನ ಬಿಡಲು ಲಂಚಕ್ಕೆ ಪೊಲೀಸರ ಬೇಡಿಕೆ!

Shilpa D

ಬೆಂಗಳೂರು: ಕಳ್ಳತನವಾಗಿದ್ದ ಬೈಕ್ ಅನ್ನು ಪತ್ತೆ ಹಚ್ಚಿದ್ದ ಪೊಲೀಸರು ಅದನ್ನು ವಾಪಸ್ ನೀಡಲು ಮಾಲೀಕನಿಗೆ ಲಂಚದ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ಮತ್ತು ಬೈಕ್ ಮಾಲೀಕ ನಡೆಸಿದ ಸಂಭಾಷಣೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಗೆ ದೊರೆತಿದೆ, ಮೋನು ಜಾನ್ ಎಂಬುವರ ಬಳಿ ಪೊಲೀಸರು ಕಳ್ಳತನವಾಗಿದ್ದ ದ್ವಿಚಕ್ರ ವಾಹನವನ್ನು ವಾಪಸ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ನಮ್ಮನನ್ನು ಖುಷಿಗೊಳಿಸಲು ನಮಗೆ ಏನಾದರೂ ನೀಡಿ ಎಂದು ಕೇಳಿರುವ ಆಡಿಯೋ ಲಭ್ಯವಾಗಿದೆ.

ಮುರುಗೇಶ್ ಪಾಳ್ಯದಿಂದ ಮೋನು ಜಾನ್ ಅವರ ಬೈಕ್ ಕಳ್ಳತನವಾಗಿತ್ತು,  ಅದನ್ನು ನಾನು ವಾಪಸ್ ತರಲು ಹೋದಾಗ ಪಕ್ಕಕ್ಕೆ ಕರೆದ ಪೊಲೀಸರು, ನಿಮ್ಮ ಬೈಕ್ ಪತ್ತೆ ಹಚ್ಚಲು   ನಾವು ಬಹಳ ಪ್ರಯತ್ನ ಪಟ್ಟಿದ್ದೇವೆ, ಹೀಗಾಗಿ ನಮಗೆ 15ಸಾವಿರ ಹಣ ನೀಡಿ ಎಂದು ಕೇಳಿದರು ಎಂದು ತಿಳಿಸಿದ್ದಾರೆ.

ಗುರುವಾರ ಕರೆ ಮಾಡಿದ ಜೆಪಿ ನಗರ ಪೊಲೀಸರು ನಿಮ್ಮ ಬೈಕ್ ಪತ್ತೆಯಾಗಿದೆ, ಬಂದು ತೆಗೆದುಕೊಂಡು ಹೋಗಿ ಎಂದು ಕರೆ ಮಾಡಿದ್ದಾರೆ, ಮತ್ತು ಇದಕ್ಕೆ ಯಾವುದೇ ಹಣ ಕಟ್ಟುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಇನ್ನೂ ಪೊಲೀಸರು ಪತ್ತೆ ಹಚ್ಚಿದ ಬೈಕ್ ವಾಪಸ್ ಪಡೆಯಲು ಯಾವುದೇ ಹಣ ನೀಡಬೇಕಿಲ್ಲ, ಲಂಚಕ್ಕೆ ಬೇಡಿಕೆ ಇಟ್ಟವರ ವಿರುದ್ಧ  ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಿಭಾಗದ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ. 

SCROLL FOR NEXT