ರಾಜ್ಯ

ಕೊರೋನಾ ನೆಗೆಟಿವ್ ವರದಿ ತರದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಕಾಲೇಜು

Manjula VN

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಿಮ ಪದವಿ ತರಗತಿ ಆರಂಭವಾದ ಮೂರನೇ ದಿನವಾದ ಗುರುವಾರವೂ ತರಗತಿಯಲ್ಲಿ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಬಂದಿದೆ. ಆದರೆ, ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಗುರುವಾರ ಶೇ.6ರಷ್ಟು ಹಾಜರಾತಿಯಲ್ಲಿ ಏರಿಕೆಯಾಗಿದೆ. 

ನಿಧಾನಗತಿಯಲ್ಲಿ ಕಾಲೇಜುಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದಾರಾದರೂ ಕೆಲ ಕಾಲೇಜುಗಳಲ್ಲಿ ಕೊರೋನಾ ನೆಗೆಟಿವ್ ವರದಿ ಹಾಗೂ ಪೋಷಕರಿಂದ ಅನುಮತಿ ತರದ ವಿದ್ಯಾರ್ಥಿಗಳಿಗೆ ತರಗತಿಗೊಳಗೆ ಬಿಟ್ಟುಕೊಳ್ಳಲು ಕಾಲೇಜುಗಳು ನಿರಾಕರಿಸುವ ಘಟನೆಗಳು ವರದಿಯಾಗಿವೆ. 

ಆಫ್ಲೈನ್ ಕ್ಲಾಸ್ ಅಟೆಂಡ್ ಮಾಡಲು ಕೊರೋನಾ ನೆಗೆಟಿವ್ ವರದಿ ಹಾಗೂ ಪೋಷಕರಿಂದ ಅನುಮತಿ ಪತ್ರವನ್ನು ಕಡ್ಡಾಯ ಮಾಡಲಾಗಿದೆ. 

ಇದರಂತೆ ನಿನ್ನೆ ಉಡುಪಿಯ ಕೌಪ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 130 ವಿದ್ಯಾರ್ಥಿಗಳು ಅನುಮತಿ ಪತ್ರವಾಗಲೀ, ಕೊರೋನಾ ನೆಗೆಟಿವ್ ವರದಿಗಳನ್ನು ತರದ ಹಿನ್ನೆಲೆಯಲ್ಲಿ ತರಗತಿಗೆ ಭೇಟಿ ನೀಡಲು ನಿರಾಕರಿಸಲಾಗಿದೆ. 

ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆಡಳಿತ ಮಂಡಳಿಯ ಆದೇಶದಂತೆ ವಿದ್ಯಾರ್ಥಿಗಳು ಕೋವಿಡ್ ನೆಗೆಟಿವ್ ವರದಿ ತರುವುದು ಹಾಗೂ ಪೋಷಕರಿಂದ ಅನುಮತಿ ಪತ್ರ ತರುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ಅವರು ಹೇಳಿದ್ದಾರೆ. 

ಇದರಂತೆ ಮುಲ್ಕಿ ಸುಂದರ್ ರಾಮ ಶೆಟ್ಟಿ ಕಾಲೇಜು, ಶಿರ್ವಾದ ವಿದ್ಯಾರ್ಥಿಗಳೂ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುವಂತಾಗಿತ್ತು. 

ಈ ನಡುವೆ ಹೇಳಿಕೆ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಪ್ರತ್ಯೇಕ ಮಾರ್ಗಗಳಲ್ಲಿ ಖಾಸಗಿ ಹಾಗೂ ಕೆಎಸ್'ಆರ್'ಟಿಸಿ ಬಸ್ ಗಳು ಓಡಾಡುತ್ತಿರುತ್ತವೆ. ವಿದ್ಯಾರ್ಥಿಗಳ ಬೇಡಿಕೆಗಳಿಗನುಗುಣವಾಗಿ ಬಸ್ ಗಳನ್ನು ಬಿಡಲಾಗುತ್ತದೆ ಎಂದಿದ್ದಾರೆ.

SCROLL FOR NEXT