ರಾಜ್ಯ

ಮಹಿಳಾ ಸಿಬ್ಬಂದಿಗಳಿಗೆ ಸ್ವ-ರಕ್ಷಣೆ ತರಬೇತಿ ನೀಡಲು ಮುಂದಾದ ಬಿಎಂಟಿಸಿ

Raghavendra Adiga

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಮಹಿಳಾ ಸಿಬ್ಬಂದಿಗೆ “ತಮ್ಮ ಸುರಕ್ಷತೆ" ಬಗ್ಗೆ ಆದ್ಯತೆ ನೀಡುವ ಉದ್ದೇಶದಿಂದ ಸ್ವ-ರಕ್ಷಣೆ ತರಬೇತಿ ನೀಡಲು ತೀರ್ಮಾನಿಸಿದೆ.

ಕರಾಟೆ, ಜೂಡೋ, ಸಮರ ಕಲೆ, ಲಿಂಗ ಸಂವೇದನೆ, ಸ್ವಯಂ ದೃಢೀಕರಣದ ಕಾನೂನು ಅರಿವು, ಸಮಾಲೋಚನೆ ಕೌಶಲ್ಯ ಮತ್ತು ಸಾರ್ವಜನಿಕ ಭಾಷಣ ಕಲೆ ಒಳಗೊಂಡಿರುವ ಪ್ರಾಯೋಗಿಕ ತರಬೇತಿ ನೀಡಲು ಬಿಎಂಟಿಸಿ ನಿರ್ಧರಿಸಿದೆ.

"ಕಂಡಕ್ಟರ್‌ಗಳು ಮತ್ತು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಬಿಎಂಟಿಸಿಯ ಮಹಿಳಾ ಸಿಬ್ಬಂದಿಗಳು ಪ್ರಯಾಣಿಕರಿಂದ ಪುರುಷ ಸಹೋದ್ಯೋಗಿಗಳಿಂದ ಕಿರುಕುಳಕ್ಕೆ ಒಳಗಾಗುವ ನಿದರ್ಶನಗಳಿವೆ. ಹಾಗಾಗಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಸ್ವ-ರಕ್ಷಣೆಯ ತಂತ್ರಗಳನ್ನು ಕಲಿಯುವ ರೀತಿಯಲ್ಲಿ ಕೋರ್ಸ್‌ಗಳನ್ನು ರೂಪಿಸಲಾಗುವುದು" ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಕೋರ್ಸ್ ನ ವಿಷಯವು ದೈನಂದಿನ ಜೀವನದಲ್ಲಿ ಅವರು ಎದುರಿಸಬಹುದಾದ ವಿಶಿಷ್ಟ ಬೆದರಿಕೆ ಸನ್ನಿವೇಶಗಳನ್ನು ಆಧರಿಸಿರುತ್ತದೆ ಮತ್ತು ಸರಳ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಚಲನೆಗಳನ್ನು ಬಳಸಿಕೊಂಡು ಅಂತಹ ಸಂದರ್ಭಗಳಿಂದ ತಮ್ಮನ್ನು ಕಾಪಾಡಿಕೊಳ್ಳುವ ಸುಲಭ ತಂತ್ರಗಳನ್ನು ಆಧರಿಸಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯೋಜನೆಯಂತೆ ಕೋರ್ಸ್ 42-ಗಂಟೆಗಳ ಅವಧಿಯದಾಗಿದೆ. ಇದನ್ನು 120 ನಿಮಿಷಗಳ ಸೆಷನ್‌ಗಳಲ್ಲಿ 21 ದಿನಗಳಲ್ಲಿ ಕಲಿಸಲಾಗುತ್ತದೆ. ಬಿಎಂಟಿಸಿ ಸಂಸ್ಥೆಯಲ್ಲಿ 3000 ಕ್ಕೂ ಹೆಚ್ಚು ಮಹಿಳಾ ಬಸ್ ಕಂಡಕ್ಟರ್‌ಗಳು ನಗರದ ನಾನಾ ಮಾರ್ಗಗಳಲ್ಲಿ ಸಂಚರಿಸುವ ಬಸ್ ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 
 

SCROLL FOR NEXT