ರಾಜ್ಯ

ಬೆಂಗಳೂರಿನಲ್ಲಿ 844 ಸೇರಿ ರಾಜ್ಯಾದ್ಯಂತ ಇಂದು 1505 ಕೊರೋನಾ ಪ್ರಕರಣಗಳು ವರದಿ

Srinivas Rao BV

ಬೆಂಗಳೂರು: ಬೆಂಗಳೂರು ನಗರದಲ್ಲಿ 844 ಸೇರಿದಂತೆ ನ.26 ರಂದು ರಾಜ್ಯಾದ್ಯಂತ ಒಟ್ಟಾರೆ 1505 ಕೊರೋನಾ ಸೋಂಕು ದೃಢಪಟ್ಟಿದೆ. 

ಈ ಮೂಲಕ ಕೋವಿಡ್-19 ಸಕ್ರಿಯ ಪ್ರಕರಣಗಳು 25316 ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಂಶಗಳ ಪ್ರಕಾರ ಕೋವಿಡ್-19 ಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಇಂದು 1067 ಜನರು ಡಿಸ್ಚಾರ್ಜ್ ಆಗಿದ್ದರೆ, 12 ಜನರು ಸಾವನ್ನಪ್ಪಿದ್ದು ಒಟ್ಟು ಸಾವಿನ ಸಂಖ್ಯೆ 11726ಕ್ಕೆ ಏರಿಕೆಯಾಗಿದೆ. ಈ ವರೆಗೂ 842499 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ವರೆಗೂ ಆಸ್ಪತ್ರೆಯ ಐಸಿಯುವಿನಲ್ಲಿ 409 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳು ಶೇಕಡಾವಾರು ಪ್ರಮಾಣ ಶೇ.1.25 ರಷ್ಟಿದ್ದು, ಮರಣದ ಪ್ರಮಾಣ ಶೇ.0.79 ರಷ್ಟಿದೆ.

SCROLL FOR NEXT