ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಗುಣಮುಖರಾಗಿದ್ದ 35 ಮಂದಿಯಲ್ಲಿ ಮಂದಿಗೆ ಮತ್ತೆ ಕೊರೋನಾ!

ಕೊರೋನಾ ಎರಡನೇ ಅಲೆ ಆರಂಭವಾಗಲಿದೆ ಎಂಬ ಆತಂಕ ಶುರುವಾಗಿರುವ ನಡುವಲ್ಲೇ ನಗರದಲ್ಲಿ ಮತ್ತೊಂದು ಆತಂಕ ಶುರುವಾಗಿದೆ. ಸೋಂಕಿನಿಂದ ಗುಣಮುಖರಾಗಿದ್ದ 35 ಮಂದಿಯಲ್ಲಿ ಮತ್ತೆ ಮಹಾಮಾರಿ ವೈರಸ್ ಕೊರೋನಾ ವಕ್ಕರಿಸಿರುವುದು ವರದಿಯಾಗಿದೆ. 

ಬೆಂಗಳೂರು: ಕೊರೋನಾ ಎರಡನೇ ಅಲೆ ಆರಂಭವಾಗಲಿದೆ ಎಂಬ ಆತಂಕ ಶುರುವಾಗಿರುವ ನಡುವಲ್ಲೇ ನಗರದಲ್ಲಿ ಮತ್ತೊಂದು ಆತಂಕ ಶುರುವಾಗಿದೆ. ಸೋಂಕಿನಿಂದ ಗುಣಮುಖರಾಗಿದ್ದ 35 ಮಂದಿಯಲ್ಲಿ ಮತ್ತೆ ಮಹಾಮಾರಿ ವೈರಸ್ ಕೊರೋನಾ ವಕ್ಕರಿಸಿರುವುದು ವರದಿಯಾಗಿದೆ. 

ನಗರದಲ್ಲಿರುವ 7 ಆಸ್ಪತ್ರೆಗಳಲ್ಲಿ 35 ಮಂದಿ ಕೊರೋನಾ ಮರು ಸೋಂಕಿಗೊಳಗಾಗಿದ್ದಾರೆ. ಬೆಂಗಳೂರಿನ 28 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಏಳುಅಧಿಕಾರಿಗಳು ಇದೂವರೆಗೂ 35 ಮಂದಿಯಲ್ಲಿ ಮರು ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಆದರೆ, ಇನ್ನುಳಿದ 17 ಆಸ್ಪತ್ರೆಗಳಲ್ಲಿ ಮರುಸೋಂಕು ತಗುಲಿರುವ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ದಾಖಲಾತಿಗಳೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. 

ಜಯನಗರ ಜನರಲ್ ಆಸ್ಪತ್ರೆಯಲ್ಲಿ 10 ಮಂದಿಯಲ್ಲಿ ಮರುಸೋಂಕು ಪತ್ತೆಯಾಗಿರುವುದು ಕಂಡು ಬಂದಿದೆ. ಈಗಾಗಲೇ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗೆ ಮರಳಿ ಸೋಂಕು ತಗುಲುವುದ ಅಪಾಯಕಾರಿಯಾಗಿರಲಿದ್ದು, ಇಂತಹ ವ್ಯಕ್ತಿಗಳು ಆಕ್ಸಿಜನ್ ಮೇಲೆ ಹೆಚ್ಚಿನ ಅವಲಂಬಿತವಾಗಿರುವಂತಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇಂತಹ ರೋಗಿಗಳನ್ನು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗ ಆಸ್ಪತ್ರೆಗೆ ದಾಖಲಾಗುವಂತೆ ಶಿಫಾರಸು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. 

ಮರಳಿ ಸೋಂಕು ತಗುಲಿ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಬಾರಿ ಸೋಂಕು ತಗುಲಿದವರದ್ಲಲಿ ಹೊಸ ರೋಗಲಕ್ಷಣಗಳು ಪತ್ತೆಯಾಗಿವೆ. ಇಂತಹವರಿಗೂ ಮೊದಲಿನಂತೆಯೇ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಚಿಕಿತ್ಸೆಗೆ ಮರು ಸೋಂಕಿತರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಸಚಿನ್ ಅವರು ಹೇಳಿದ್ದಾರೆ. 

ಇತ್ತೀಚೆಗಷ್ಟೇ ನಡೆದ ಬ್ರಿಟೀಷ್ ಅಧ್ಯಯನದ ಪ್ರಕಾರ, ಮೊದಲ ಬಾರಿಗೆ ಸೋಂಕು ತಗುಲಿದ ವ್ಯಕ್ತಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಿಕಿತ್ಸೆಗಳನ್ನು ನೀಡಿರುವುದರಿಂದ 6 ತಿಂಗಳಳೊಳಗೆ ಮರು ಸೋಂಕು ತಗುಲುವುದು ವಿರಳವಾಗಿರುತ್ತದೆ. ಚಿಕಿತ್ಸೆಯು ಅಸಮರ್ಪಕವಾಗಿದ್ದಾಗ ಮಾತ್ರ ಮರು ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ. 

ಜೀನೋಮಿಕ್ ಸ್ಟಡಿ ಮತ್ತು ವೈರಲ್ ಕಲ್ಚರಲ್ ಪರೀಕ್ಷೆಗಾಗಿ ಮಾದರಿಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಪುಣೆ) ಗೆ ಕಳುಹಿಸಲಾಗಿದೆ, ಮರು ಸೋಂಕು ಯಾವ ರೀತಿ, ಎರಡನೇ ಬಾರಿ ತಗುಲಿದ ಸೋಂಕು ಒಂದೇ ರೀತಿಯಲ್ಲಿಯೇ ಇರುತ್ತದೆಯೇ ಎಂಬುದನ್ನು ಪತ್ತೆಹಚ್ಚಲಾಗುತ್ತದೆ ಎಂದು ಡಾ.ನಾಗರಾಜ್ ಅವರು ಹೇಳಿದ್ದಾರೆ. 

ಇನ್ನು ನಗರದ ಫೋರ್ಟಿಸ್ ಆಸ್ಪತ್ರೆಯಲ್ಲೂ ಮರು ಸೋಂಕು ತಗುಲಿರುವ ಒಂದು ಪ್ರಕರಣ ಪತ್ತೆಯಾಗಿದೆ. ರಾಮಯ್ಯ ಆಸ್ಪತ್ರೆಯಲ್ಲಿಯೂ ಮೂವರು ಆರೋಗ್ಯ ಕಾರ್ಯಕರಲ್ಲಿ ಎರಡು ಬಾರಿ ಸೋಂಕು ಪತ್ತೆಯಾಗಿದೆ. ಆದರೆ, ಎರಡನೇ ಬಾರಿ ತಗುಲಿರುವ ಸೋಂಕು ಲಕ್ಷಣರಹಿತವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಿಸ್ಟೈನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೂರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 5 ಮಂದಿಯಲ್ಲಿ ಮರು ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ