ರಾಜ್ಯ

ರೈತರನ್ನು ಗೌರವದಿಂದ ನೋಡಿ: ಕೇಂದ್ರ ಸರ್ಕಾರಕ್ಕೆ ದೇವೇಗೌಡ

Manjula VN

ಬೆಂಗಳೂರು: ರೈತರನ್ನು ಗೌರವದಿಂದ ನೋಡುವಂತೆ ಹಾಗೂ ಅವರೊಂದಿಗೆ ಸಮಾಲೋಚನೆ ನಡೆಸುವಂತೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಕೇಂದ್ರದ ನೂತನ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸುವ ಸಲುವಾಗಿ ದೆಹಲಿಗೆ ತೆರಳುತ್ತಿದ್ದ ಪಂಜಾಬ್ ರೈತರು, ಹರಿಯಾಣ ಮತ್ತು ದೆಹಲಿ ಗಡಿಯಲ್ಲಿ ಪೊಲೀಸರ ಜಲಫಿರಂಗಿಗಳನ್ನು, ಅಶ್ರುವಾಯುಗಳನ್ನು ಎದುರಿಸುವ ಘಟನೆ ನಡೆಯಿತು. 

ಈ ಘಟನೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ದೇವೇಗೌಡ ಅವರು, ರೈತರನ್ನು ಗೌರವದಿಂದ ಕಾಣುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ರೈತರನ್ನು ಗೌರವದಿಂದ ಕಾಣುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ. ದಯವಿಟ್ಟು ಅವರೊಂದಿಗೆ ಮಾತುಕತೆ ನಡೆಸಿ. ಅವರ ಮಾತುಗಳನ್ನು ಕೇಳಿ. ಪೊಲೀಸ್ ಪಡೆ ಸಮಸ್ಯೆಯನ್ನು ಪರಿಹರಿಸದು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಕೃಷಿ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸುವ ನೂತನ ಕೃಷಿ ಮಸೂದೆಗಳನ್ನು ರದ್ದುಗೊಳಿಸುವಂತೆ ರೈತರು ಆಗ್ರಹಿಸುತ್ತಿದ್ದು, ಕೇಂದ್ರದ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತುಹಾಕಲು ಕಾರಣವಾಗುತ್ತವೆ ಎಂದು ರೈತರು ಪ್ರತಿಪಾದಿಸುತ್ತಿದ್ದಾರೆ. 

SCROLL FOR NEXT