ರಾಜ್ಯ

ಕೊರೋನಾ ಎಫೆಕ್ಟ್: 480 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇತಿಹಾಸ ಪ್ರಸಿದ್ಧ ಕಡೆಕಾಯಿ ಪರಿಷೆಗೆ ಬ್ರೇಕ್!

Manjula VN

ಬೆಂಗಳೂರು: 480 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯ ಬಸವನಗುಡಿಯಲ್ಲಿ ಪ್ರತೀವರ್ಷ ನಡೆಯುವ ಇತಿಹಾಸ ಪ್ರಸಿದ್ಧ, ಗ್ರಾಮೀಣ ಸೊಗಡಿನ ಕಡಲೆಕಾಯಿ ಪರಿಷೆ ಜಾತ್ರೆಗೆ ನಿರ್ಬಂಧ ಹೇರಲಾಗಿದೆ. 

ಕಾರ್ತಿಕ ಮಾಸದ ಕೊನೆಯ ಸೋಮವಾರದಂದು 3 ದಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಈ ವರ್ಷ ರಾಜಧಾನಿ ಬೆಂಗಲೂರಿನ 480 ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಕಡಲೆಕಾಯಿ ಪರಿಷೆಯ ಸಂಭ್ರಮಕ್ಕೆ ಕೊರೋನಾ ವೈರಸ್ ಅಡ್ಡಿಯಾಗಿದೆ. 

ಕೊರೋನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ದೊಡ್ಡ ಗಣೇಶ ಹಾಗೂ ಬಸವಣ್ಣನಿಗೆ ಪೂಜೆ ಮಾಡುವ ಮೂಲಕ ಸರಳವಾಗಿ ನಡೆಸಲು ಧಾರ್ಮಿತ ದತ್ತಿ ಇಲಾಖೆ ಆದೇಶ ಹೊರಡಿಸಿದೆ. 

ಕೊರೋನಾ ಹಿನ್ನೆಲೆಯಲ್ಲಿ ಬಸ್ತೆ ಬದಿ ಕಡಲೆಕಾಯಿ ಮಾರಾಟ ಮಾಡುವಂತಿಲ್ಲ. ಎಂಬುದನ್ನು ಸಾರ್ವಜನಿಕರಿಗೆ ಅರುವು ಮೂಜಡಿಸಬೇಕು. ಜೊತೆಗೆ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ಉಪಸ್ಥಿತಿಯಲ್ಲಿ ಸಾಂಕೇತಿಕ, ಸಾಂಪ್ರದಾಯಿಕ ಹಾಗೂ ಸರಳವಾಗಿ ಕಡಲೆಕಾಯಿ ಪರಿಷೆಯನ್ನು ಆಚರಣೆ ಮಾಡಬೇಕೆಂದು ಸೂಚನೆ ನೀಡಲಾಗಿದೆ. 

ಪರಿಷೆಯಲ್ಲಿ ವಿವಿಧ ತಳಿಯ ಕಡಲೆಕಾಯಿಗಳದ್ದೇ ಕಾರುಬಾರು. ಜೊತೆಗೆ ರಾಜ್ಯ ಹಾಗೂ ಹೊರ ರಾಜ್ಯದ ವ್ಯಾಪಾರಿಗಳು ಬೀಡುಬಿಡುತ್ತಾರೆ. ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಿಂದ ಲಕ್ಷಾಂತರ ಜನರು ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಕೊರೋನಾ ಕಾರಣದಿಂದಾಗಿ ಧಾರ್ಮಿಕ ದತ್ತಿ ಇಲಾಖೆ ದೊಡ್ಡ ಬಸವಣ್ಣ ದೇವಸ್ಥಾನದ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ಬದಿ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದು ಹಾಗೂ ರಸ್ತೆ ಬದಿ ಕಡಲೆಕಾಯಿ ಮಾರಾಟಕ್ಕೂ ನಿರ್ಬಂಧ ವಿಧಿಸಿದೆ. 

ರಾಜ್ಯದ ಹಲವು ಗ್ರಾಮಗಳು ಹಾಗೂ ತಮಿಳುನಾಡಿನಿಂದಲು ಕೆಲ ವರ್ಷಗಳಿಂದ ರೈತರು ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಂಡು ವ್ಯಾಪಾರ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಬಿಬಿಎಂಪಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಆದೇಶದಿಂದಾಗಿ ಜಾತ್ರೆ ನಡೆಯುತ್ತಿಲ್ಲ. ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ಮಾತನಾಡಿ, ಈ ಬಾರಿ ಕಡಲೆಕಾಯಿ ಪರಿಷೆಯನ್ನು ಹಿಂದಿನ ವರ್ಷಗಳಂತೆ ಆಚರಣೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. 

ಪರಿಷೆಗೆ ಲಕ್ಷಾಂತರ ಜನರು ಆಗಮಿಸುತ್ತಿದ್ದರು. ಈ ಬಾರಿ ಹೆಚ್ಚೆಚ್ಚು ಜನರು ಭಾಗವಹಿಸುವುದರಿಂದ ಅಪಾಯ ಸೃಷ್ಟಿಯಾಗಲಿದೆ. ಪರಿಷೆಯಲ್ಲಿ ಪಾಲ್ಗೊಂಡು ಜನರು ವೈರಸ್ ಜೊತೆಗೆ ಮನೆಗೆ ಹೋಗಬೇಕಾಗುತ್ತದೆ. ಜನರ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

ಮಾಧ್ಯಮಗಳ ಮೂಲಕ ಅಧಿಕಾರಿಗಳು ಈಗಾಗಲೇ ಜನರನ್ನು ಪರಿಷೆಗೆ ಬಾರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಜಾತ್ರೆಗೂ ಮುನ್ನವೇ ಜನರು ಬಸವನಗುಡಿಯಲ್ಲಿ ಸೇರಲು ಆರಂಭಿಸುತ್ತಿದ್ದಾರೆ. ಮಳಿಗೆಗಳನ್ನು ಹಾಕರು ಮುಂದಾಗಿದ್ದೇ ಆದರೆ, ಬಿಬಿಎಂಪಿ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಕ್ರಮಗಳನ್ನು ಕೈಗೊಳ್ಳಲಾಗುತ್ತೆದ ಎಂದಿದ್ದಾರೆ. 

ಧಾರ್ಮಿಕ ಕಾರ್ಯಕ್ರಮಗಳು ಪ್ರತೀ ವರ್ಷದಂತೆ ನಡೆಯುತ್ತವೆ. ಆದರೆ, ಆ ಧಾರ್ಮಿಕ ಕಾರ್ಯಕ್ರಮಗಳು ದೊಡ್ಡ ಗಣಪತಿ ಹಾಗೂ ದೊಡ್ಡ ಬಸವನಗುಡಿಯಲ್ಲಷ್ಟೇ ಸೀಮಿತವಾಗಿರಲಿದೆ ಎಂದು ಹೇಳಿದ್ದಾರೆ. 

SCROLL FOR NEXT