ರಾಜ್ಯ

ವಿಜಯಪುರ: ಲಸಿಕೆಗೆ 12,618 ಆರೋಗ್ಯ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿದ ಅಧಿಕಾರಿಗಳು

Manjula VN

ವಿಜಯಪುರ: ವೈದ್ಯರು, ನರ್ಸ್,ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಲ್ಯಾಬ್ ಟೆಕ್ನಿಷಿಯನ್ ಗಳು ಸೇರಿದಂತೆ ಒಟ್ಟು 12, 618 ಮಂದಿ ಕೊರೋನಾ ವಾರಿಯರ್ಸ್ ವಿಜಯಪುರದಲ್ಲಿ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.

ಮಹಾಮಾರಿ ಕೊರೋನಾ ಸೋಂಕಿಗೆ ಲಸಿಕೆ ಸಿದ್ದಪಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಮೊದಲು ಲಸಿಕೆ ನೀಡುವ ಸಲುವಾಗಿ ಸರ್ಕಾರದ ಸೂಚನೆಯಂತೆ ಆರೋಗ್ಯ ಕಾರ್ಯಕರ್ತರ ಪಟ್ಟಿಗಳನ್ನು ಸಿದ್ಧಪಡಿಸಲಾಗುತ್ತಿದೆ. 

ಇದರಂತೆ ವಿಜಯಪುರದಲ್ಲಿ ಜಿಲ್ಲಾ ಆಡಳಿತ ಮಂಡಳಿಯು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 12,618 ಆರೋಗ್ಯ ಕಾರ್ಯಕರ್ತರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಶೀಘ್ರದಲ್ಲೇ ಪಟ್ಟಿ ಸಲ್ಲಿಸಲಿದೆ. 12,618 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ 7,774 ಮಂದಿ ಖಾಸಗಿಯವರು ಹಾಗೂ 4,844 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿದ್ದಾರೆಂದು ತಿಳಿದುಬಂದಿದೆ. 

ಈ ಕುರಿತು ಮಾಹಿತಿ ನೀಡಿರುವ ಉಪ ಆಯುಕ್ತ ಪಿ.ಸುನಿಲ್ ಕುಮಾರ್ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ಮಾತ್ರ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. 

ಕೋವಿಡ್ ಲಸಿಕೆ ಸಂಗ್ರಹಿಸಲು ಸಾಕಷ್ಟು ಮೂಲಸೌಕರ್ಯಗಳನ್ನು ಹೊಂದಿರಬೇಕೆಂದು ಕೇಂದ್ರ ಸರ್ಕಾರದ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಉನ್ನತ ಅಧಿಕಾರಿಗಳಿಗೆ ವರದಿಯನ್ನು ಕಳುಹಿಸಿದೆ. ವರದಿಯಲ್ಲಿ 100 ಐಸ್ ಲೈನ್ ರೆಫ್ರಿಜರೇಟರ್‌ಗಳು, 83 ಡೀಪ್ ಫ್ರೀಜರ್‌ಗಳು, 1,180 ವ್ಯಾಕ್ಸಿನ್ ಕ್ಯಾರಿಯರ್, 108 ಕೋಲ್ಡ್ ಬಾಕ್ಸ್'ಗಳು, 9,136 ಐಸ್ ಪ್ಯಾಕ್‌ಗಳು ಮೂರು ವಾಕ್-ಇನ್ ಕೂಲರ್‌ಗಳಿವೆ ಎಂದು ತಿಳಿಸಿದೆ. 

SCROLL FOR NEXT