ರಾಜ್ಯ

ಬನ್ನೇರುಘಟ್ಟ: ಹೆಣ್ಣು ಮರಿಗೆ ಜನ್ಮಕೊಟ್ಟ ಝೀಬ್ರಾ

Manjula VN

ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಾವೇರಿ ಎಂಬ ಹೆಸರಿನ ಝೀಬ್ರಾ ಹೆಣ್ಣು ಮರಿಯೊಂದಕ್ಕೆ ಜನ್ಮನೀಡಿದೆ ಎಂದು ಉದ್ಯಾನವನದ ಆಡಳಿತಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ. 

ತಾಯಿ ಹಾಗೂ ಮರಿಯ ಚಿತ್ರ ಬಿಡುಗಡೆ ಮಾಡಿದ ಅವರು, 6 ವರ್ಷದ ಕಾವೇರಿ ಹಾಗೂ ಭರತ್ ಎಂಬ ಜೋಡಿಗೆ ಈ ಹೆಣ್ಣು ಮರಿ ಜನಿಸಿದೆ. ಇದರೊಂದಿಗೆ ಪಾರ್ಕ್ ನಲ್ಲಿ ಝೀಬ್ರಾಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದ್ದು, ತಾಯಿ ಮತ್ತು ಮಗುಎರಡೂ ಆರೋಗ್ಯವಾಗಿವೆ. 

ಪಾರ್ಕ್ ನಲ್ಲಿ ಇದು 3ನೇ ಝೀಬ್ರಾ ಪ್ರಸವವಾಗಿದ್ದು, ಸಿಬ್ಬಂದಿಯೂ ತುಂಬಾ ಜಾಗ್ರತೆಯಿಂದ ನೋಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 

ವೈದ್ಯ ಉಮಾಶಂಕರ್ ಅವರು ಮಾತನಾಡಿ, ಪ್ರಾಣಿ ವಿನಿಮಯ ಯೋಜನೆಯಡಿ ಇಸ್ರೇಲ್ ದೇಶದ ಟೆಲ್ ಅವಿವ್'ನ ರಮಾತ್ ಗನ್ ಸಫಾರಿಯ ಝೂವಾಲಾಜಿಕಲ್ ಸೆಂಟರ್ ನಿಂದ ಈ ಝೀಬ್ರಾಗಳನ್ನು ತರಿಸಲಾಗಿತ್ತು. ಗರ್ಭಧಾರಣೆ ಅವಧಿ 12 ತಿಂಗಳಾಗಿದ್ದು, ಪ್ರಸವ ಸಮಯದಲ್ಲಿ ಯಾರೂ ಸಮೀಪ ಸುಳಿಯದಂತೆ ಗಂಡು ಝೀಬ್ರಾ ಕಾವಲು ಕಾಯುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT