ರಾಜ್ಯ

ಕೋವಿಡ್ 19:ರಾಜ್ಯದಲ್ಲಿಂದು 8,793 ಹೊಸ ಕೊರೋನಾ ಪ್ರಕರಣ, 125 ಮಂದಿ ಸಾವು

Raghavendra Adiga

ಬೆಂಗಳೂರು: ರಾಜ್ಯದಲ್ಲಿಂದು ಹೊಸದಾಗಿ 8,793 ಕೊರೋನಾ ಪ್ರಕರಣಗಳು ವರದಿಯಾಗಿದ್ದು 125 ಮಂದಿ ಸಾವಿಗೀಡಾಗಿದ್ದಾರೆ.

ಇಂದಿನವರೆಗೆ ರಾಜ್ಯದಲ್ಲಿ ಒಟ್ಟಾರೆ 6,20,630 ಕೊರೋನಾ ಪ್ರಕರಣಗಳು ದಾಖಲಾಗಿದ್ದು 9,119 ಮಂದಿ ಸಾವನ್ನಪ್ಪಿದ್ದಾರೆ.

ಇಂದು ಒಂದೇ ದಿನ 7,094 ಮಂದಿ ಕೊರೋನಾದಿಂದ ಚೇತರಿಸಿಕೊಂಡು ಆಸೊಅತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗೆ 4,99,506 ಮಂದಿ ಕೊರೋನಾದಿಂದ ಗುಣವಾಗಿದ್ದಾರೆ.

ರಾಜ್ಯದಲ್ಲಿ ಒಟ್ತಾರೆ 1,11,986 ಸಕ್ರಿಯ ಪ್ರಕರಣಗಳಿದ್ದು ಬೆಂಗಳೂರು ನಗರದಲ್ಲಿ ಇಂದೂ ಸಹ ನಾಲ್ಕು ಸಾವಿರ ಹೊಸ ಪ್ರಕರಣಗಳು ದಾಖಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು 4,259 ಹೊಸ ಪ್ರಕರಣ ದಾಖಲಾಗಿದ್ದು 47 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿ ಇದುವರೆಗೆ ಒಟ್ತಾರೆ 2,41,775 ಕೋವಿಡ್ ಪ್ರಕರಣಗಳು ವರದಿಯಾಗಿದ್ದು 3,024 ಮಂದಿ ಬಲಿಯಾಗಿದ್ದಾರೆ.

SCROLL FOR NEXT