ರಾಜ್ಯ

200 ದಿನಗಳ ನಂತರ ಭಕ್ತರಿಗೆ ಮಂತ್ರಾಲಯದಲ್ಲಿ ಗುರುರಾಯರ ದರ್ಶನ

Raghavendra Adiga

ರಾಯಚೂರು: ಗುರು ರಾಘವೇಂದ್ರಸ್ವಾಮಿಗಳ ದಿವ್ಯ ಸಾನ್ನಿದ್ಯವಿರುವ ಮಂತ್ರಾಲಯ ರಾಘವೇಂದ್ರ ಮಠದ ಆವರಣವನ್ನು 200  ದಿನಗಳ ನಂತರ ಇಂದು ಭಕ್ತರಿಗೆ ಮುಕ್ತಗೊಳಿಸಲಾಗಿದೆ.

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಯರ ದರ್ಶನವನ್ನು ನಿಷೇಧಿಸಿದ್ದ ಮಠ ಇಂದು ಪುನಃ ಭಕ್ತರಿಗೆ ರಾಯರ ದರ್ಶನ ಮಾಡಲು ಅವಕಾಶ ಕಲ್ಪಿಸಿದೆ.

ಮಠದ ಮುಖ್ಯದ್ವಾರವನ್ನಿಂದು ತೆರೆದ ಹಿನ್ನೆಲೆ ಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥರು ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಭಕ್ತಾದಿಗಳಿಗೆ ರಾಯರ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು.

ಕೊರೋನಾ ಕಾರಣದಿಂದ ಮಾರ್ಚ್ 21 ರಿಂದ ರಾಯರ ವೃಂದಾವನ ದರ್ಶನ ಭಕ್ತರಿಗೆ ಇಲ್ಲವಾಗಿತ್ತು.

ಮಠಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮಾಡಬೇಕಿದೆ. ಜತೆಗೆ ಕೊರೋನಾ ಕಾಲದ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಮಠದ ಪ್ರಕಟಣೆ ಹೇಳಿದೆ. 
 

SCROLL FOR NEXT