ರಾಜ್ಯ

1970-80ರ ನಂತರದ ದಶಕದಲ್ಲಿ'ಬೆಂಗಳೂರು ಅಂಡರ್ ವರ್ಲ್ಡ್'ನಿಂದ ಅತಿದೊಡ್ಡ ಮಟ್ಟದ ಡ್ರಗ್ಸ್ ಪೂರೈಕೆ 

Nagaraja AB

ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ ಪೊಲೀಸರು ಎನ್ ಡಿಪಿಎಸ್ ಕಾಯ್ದೆಯಡಿ 3 ಟನ್ ಗಾಂಜಾ ಜಪ್ತಿ ಮಾಡಿ, 15ಕ್ಕೂ ಹೆಚ್ಚು ಜನರನ್ನು ಬಂಧಿಸಿದ ನಂತರ ಬೆಂಗಳೂರು ನಗರದಲ್ಲಿ ನಿಷೇಧಿತ ಡ್ರಗ್ಸ್ ವ್ಯಾಪಕ ಬಳಕೆ  ತೀವ್ರ ಕಳವಳ ಮೂಡಿಸಿದೆ.

ಬಂಧಿತರಲ್ಲಿ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಇವೆಂಟ್ ಮ್ಯಾನೇಜರ್ ವಿರೇನ್ ಖಾನ್ನಾ ಮತ್ತು ಇಬ್ಬರು ವಿದೇಶಿ ಪ್ರಜೆಗಳು ಕೂಡಾ ಸೇರಿದ್ದಾರೆ.

ಆದರೆ, ಆದರೆ 1970 ರ ದಶಕದ ಉತ್ತರಾರ್ಧದಲ್ಲಿಯೇ ಕಾಲೇಜು ಕ್ಯಾಂಪಸ್‌ಗಳು ಮತ್ತು ಮನರಂಜನಾ ತ್ಮಕ ವಲಯಗಳಲ್ಲಿ ಡ್ರಗ್ಸ್ ಬಗ್ಗೆ ಪರಿಚಯ ಇತ್ತು ಎಂಬುದಾಗಿ ಹಳೆಯ ಬೆಂಗಳೂರು ನಾಗರಿಕರು ಹೇಳುತ್ತಾರೆ.

ಆಗ ಕ್ವಾರಟರ್ ಗ್ರಾಮ್ ಹೆರಾಯಿನ್ 30 ರೂ. ಗೆ. ಸಿಗುತಿತ್ತು. ನಶೆಯ ಲೋಕಕ್ಕೆ ಕರೆದೊಯ್ಯುವ ಈಗ ನಿಷೇಧ ಗೊಂಡಿರುವ ಆಂಫೆಟಮೈನ್ ಮತ್ತು ಮೆಥಾಕ್ವಾಲೋನ್ ಮಾತ್ರೆಗಳನ್ನು  ವ್ಯಸನಿಗಳು ತೆಗೆದುಕೊಳ್ಳುತ್ತಿದ್ದರು.

1970 ಮಧ್ಯೆ ಮತ್ತು 1980ರ ನಂತರದ ದಶಕದಲ್ಲಿ ಡ್ರಗ್ಸ್ ದೊರೆಯುತಿತ್ತು. ಮನೋರಂಜನಾ ಕ್ಷೇತ್ರದಲ್ಲಿರುವವರು, ಕಾಲೇಜ್ ವಿದ್ಯಾರ್ಥಿಗಳು ಮತ್ತಿತರ ಬಳಿ ಅದು ಇರುತಿತ್ತು. ಶಿವಾಜಿನಗರ ಮತ್ತು ಜೆ ಸಿ ರಸ್ತೆ ಮತ್ತಿತರ ನಗರದ ಸ್ಲಂಗಳಲ್ಲಿ ಡ್ರಗ್ಸ್ ಅಡ್ಡೆಗಳಿದ್ದವು ಎಂದು ವ್ಯಸನದಿಂದ ಮುಕ್ತರಾಗಿರುವ ವ್ಯಕ್ತಿಯೊಬ್ಬರು ನೆನಪಿಸಿಕೊಳ್ಳುತ್ತಾರೆ.

ಇಂತಹ ಅಡ್ಡೆಗಳಿಗೆ ಭೂಗತ ಜಗತ್ತಿನವರ ರಕ್ಷಣೆ ಇರುತಿತ್ತು.1980ರ ಮಧ್ಯದಲ್ಲಿ ಬೆಂಗಳೂರಿನ ಡಾನ್ ಎನಿಸಿಕೊಂಡಿದ್ದ ಕೋಳಿ ಫಯಾಜ್ , ಚಿಕ್ಕತ್ ಫಯಜ್, ಬಾಷಾ ಮತ್ತಿತರರು ಹಣ ತೆಗೆದುಕೊಂಡು ಗ್ರಾಹಕರಿಗೆ  ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು.

ಕೋಳಿ ಫಯಾಜ್ ಗೆ ಮುಂಬೈ ಅಂಡರ್ ವರ್ಲ್ಡ್ ನೊಂದಿಗೆ ನಂಟಿತ್ತು. ಈ ಜಾಲದ ಮೂಲಕ ಬೆಂಗಳೂರಿನಲ್ಲಿ ಗ್ರಾಹಕರಿಗೆ ಡ್ರಗ್ಸ್ ದೊರೆಯುವಂತೆ ಮಾಡಲಾಗುತಿತ್ತು ಎಂದು ಮತ್ತೊಬ್ಬ ವ್ಯಸನ ಮುಕ್ತ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ಗ್ರಾಮ್ ಹೆರಾಯಿನ್ 100 ರೂ.ಗೆ ಸಿಗುತಿತ್ತು. ಇದನ್ನು ಗಾರ್ಡ್ ಎಂದು ಕರೆಯಲಾಗುತಿತ್ತು. ಅಪ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಭಾರತದ ಗಡಿ ಪ್ರದೇಶಗಳಿಗೆ ಹೆರಾಯಿನ್ ಬರುತಿತ್ತು.ಶ್ರೀಲಂಕಾ ವಿರುದ್ಧದ ಸಶಸ್ತ್ರ ಹೋರಾಟವನ್ನು ಹೆಚ್ಚಿಸಲು ಎಲ್‌ಟಿಟಿಇ ಹೆಚ್ಚು ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿತ್ತು.ಆ ಸಂದರ್ಭದಲ್ಲಿ ಎಸಿಪಿಯಾಗಿದ್ದ ಜಯರಾಮ್, ಮಾದಕ ವಸ್ತು ಬಳಕೆ ನಿಯಂತ್ರಿಸಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾಗಿ ಮತ್ತೋಬ್ಬ ವ್ಯಕ್ತಿ ನೆನಪು ಮಾಡಿಕೊಂಡರು.

ಎನ್ ಡಿಪಿಎಸ್ ಕಾಯ್ದೆ ಬಂದ ವೇಳೆಯಲ್ಲಿ ಅನೇಕ ವ್ಯಸನಿಗಳು ಜೈಲಿನಲ್ಲಿಯೇ ಮೃತಪಟ್ಟರು, ಕೆಲವರು ಆತ್ಮಹತ್ಯೆ ಮಾಡಿಕೊಂಡರು, ಮಾದಕ ವಸ್ತು ವ್ಯಸನ ಜಗತ್ತಿನ ಅತಿ ದೊಡ್ಡ ಪಿಡುಗು ಆಗಿದೆ. ಸುಧಾರಣೆಯ ಹಾದಿ ಭರವಸೆ ಮೂಡಿಸಿರುವುದಾಗಿ ಅವರು ತಿಳಿಸಿದ್ದಾರೆ.

SCROLL FOR NEXT