ರಾಜ್ಯ

ಹಿಂದೂ ಧರ್ಮ ಧರ್ಮವೇ ಅಲ್ಲ, ಹಿಂದೂ ಧರ್ಮವೆಂದರೆ ಬ್ರಾಹ್ಮಣರು ಎಂದು ಅರ್ಥ: ಕೆ ಎಸ್ ಭಗವಾನ್

Shilpa D

ಮೈಸೂರು: ಶ್ರೀ ರಾಮನ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದ ಪ್ರೊ. ಕೆ ಎಸ್‌ ಭಗವಾನ್‌ ಈಗ ಹಿಂದೂ ಧರ್ಮದ ಕುರಿತಾಗಿ ಮಾತನಾಡಿ ಇನ್ನೊಂದು ವಿವಾದ ಸೃಷ್ಟಿಸಿದ್ದಾರೆ. ಹಿಂದೂ ಎಂಬುದು ಒಂದು ಧರ್ಮವೇ ಅಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ ಹಿಂದೂ ಧರ್ಮವೆಂದರೆ ಬ್ರಾಹ್ಮಣರು ಎಂದು ಅರ್ಥ. ಹಿಂದು ಎಂಬ ಪದವನ್ನು ಬಳಕೆ ಮಾಡಿದವರು ಪರ್ಶಿಯನ್ನರು. ಅದನ್ನು ಬಿಟ್ಟು ಬೇರೆ ಪದ ಹುಡುಕಲು ನಿಮಗೆ ಆಗಲಿಲ್ವಾ, ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಧರ್ಮ ಧರ್ಮವೇ ಅಲ್ಲ. ಹಿಂದೂ ಧರ್ಮ ಎಂದರೆ ಬ್ರಾಹ್ಮಣರು ಎಂದರ್ಥ. ಗ್ರಾಮೀಣ ಜನರಿಗೆ ಹಿಂದೂ ಎಂದರೆ ಏನೆಂದು ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಎಂದು ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹಿಂದೂ ಧರ್ಮ ಎಂದರೆ ಅವರಿಗೆ ಗೊತ್ತೇ ಇಲ್ಲ. ಹೀಗಾಗಿ, ಹಿಂದೂ‌ ಪದವನ್ನು ತೆಗೆದು ಹಾಕಬೇಕು ಎಂದು ಮೈಸೂರಿನಲ್ಲಿ ಪ್ರೊ. ಕೆ.ಎಸ್. ಭಗವಾನ್ ಹೇಳಿದ್ದಾರೆ.

ಮುಸ್ಲಿಮರನ್ನು ಕೊಳಕು ಎನ್ನುವ ನೀವು ಅವರ ಬಾಯಿಂದ ಬಂದಿರುವ ಹಿಂದೂ ಪದವನ್ನು ನಿಮ್ಮ ಧರ್ಮಕ್ಕೆ ಇಟ್ಟಿದ್ದೀರ. ನಿಮಗೆ ಮಾನ, ಮರ್ಯಾದೆ ಇದ್ದರೆ ಹಿಂದೂ ಎಂಬ ಪದವನ್ನು ತೆಗೆದು ಹಾಕಿ. ಪರ್ಷಿಯನ್ನರು ಸಿಂಧೂ ಪದವನ್ನು ಹಿಂದೂ ಎಂದರು. ಅವರು ಬಳಸಿದ ಪದವನ್ನ ನಿಮ್ಮ ಧರ್ಮದ ಹೆಸರಿಗೆ ಬಳಸಿಕೊಂಡಿದ್ದೀರ. ಹಿಂದೂ ಎಂದರೆ ಬ್ರಾಹ್ಮಣರು, ಉಳಿದವರೆಲ್ಲಾ ಶೂದ್ರರು. ಶೂದ್ರರು ಎಂದರೆ ಮನುಸ್ಮೃತಿಯಲ್ಲಿ ವೇಶ್ಯೆಯರು ಎಂದು ಉಲ್ಲೇಖವಾಗಿದೆ. 

ಉಪನಿಷದ್, ವೇದ ಮತ್ತು ಇತರೆ ಯಾವುದೇ ಪುರಾಣ ಗ್ರಂಥಗಳಲ್ಲಿ ಹಿಂದೂ ಧರ್ಮದ ಉಲ್ಲೇಖವಿಲ್ಲ, ಬೌದ್ಧಧರ್ಮವು ದೇಶದ ಪ್ರಮುಖ ಧರ್ಮವಾದ್ದರಿಂದ ಶ್ರೀಮಂತ ಧರ್ಮವಾಗಿದ್ದ ಬೌದ್ಧ ಧರ್ಮದ ಬಗ್ಗೆ ಉಲ್ಲೇಖವಿದೆ ಎಂದು ಅವರು ಹೇಳಿದರು.

SCROLL FOR NEXT