ಸಂಗ್ರಹ ಚಿತ್ರ 
ರಾಜ್ಯ

ದಾವಣೆಗೆರೆ: ಎರಡನೇ ಮದುವೆ ರಹಸ್ಯ ಮುಚ್ಚಿಡಲು 3 ವರ್ಷದ ಮಗು ಹತ್ಯೆಗೈದ ಪಾಪಿ ತಂದೆ!

ತನ್ನ ಎರಡನೇ ಮದುವೆಯ ರಹಸ್ಯ ಮುಚ್ಚಿಡುವ ಸಲುವಾಗಿ ತಂದೆಯೊಬ್ಬ ಹೆತ್ತ ಮಗಳನ್ನೇ ಕೊಂದು ಹೂತುಹಾಕಿದ ಅಮಾನವೀಯ ಘಟನೆ ದಾವಣೆಗೆರೆಯ ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನಡೆದಿದೆ. 

ದಾವಣಗೆರೆ: ತನ್ನ ಎರಡನೇ ಮದುವೆಯ ರಹಸ್ಯ ಮುಚ್ಚಿಡುವ ಸಲುವಾಗಿ ತಂದೆಯೊಬ್ಬ ಹೆತ್ತ ಮಗಳನ್ನೇ ಕೊಂದು ಹೂತುಹಾಕಿದ ಅಮಾನವೀಯ ಘಟನೆ ದಾವಣೆಗೆರೆಯ ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನಡೆದಿದೆ. 

ನಿಂಗಪ್ಪ (35) ಮಗುವನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದ ಆರೋಪಿ ನಿಂಗಪ್ಪನಿಗೆ ಅದಾಗಲೇ ಇಬ್ಬರು ಗಂಡು ಮಕ್ಕಳಿದ್ದು, ಈ ನಡುವಲ್ಲೇ ಚಿತ್ರದುರ್ಗದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿಶಕಲಾ ಅವರನ್ನು 2ನೇ ವಿವಾಹವಾಗಿದ್ದ. ತನ್ನ 2ನೇ ಪತ್ನಿ ಹಾಗೂ ಮಗಳು ಶಿರಿಶಾ ಜೊತೆಗೆ ಚಿತ್ರದುರ್ಗದಲ್ಲಿಯೇ ವಾಸಾಗಿದ್ದ. 

ಪತಿಯ ಬಗ್ಗೆ ಅನುಮಾನಗೊಂಡಿದ್ದ ನಿಂಗಪ್ಪ ಅವರ ಪತ್ನಿ ಈ ಬಗ್ಗೆ ಪ್ರಶ್ನೆ ಮಾಡಲು ಆರಂಭಿಸಿದ್ದರು. ಇದರಿಂದ ಬೇಸತ್ತಿದ್ದ ನಿಂಗಪ್ಪ ಅವರು, ಮಗಳು ಶಿರಿಶಾಳನ್ನು ಅಪಹರಣ ಮಾಡಿ ಹತ್ಯೆ ಮಾಡಿದ್ದಾನೆ. ಶಶಿಕಲಾ ಅವರು ತಮ್ಮ ಮಗುವಿನ ಕುರಿತು ನಿಂಗಪ್ಪ ಅವರನ್ನು ವಿಚಾರಿಸಿದಾಗ ತನ್ನ ಗೆಳೆಯನ ಮನೆಯಲ್ಲಿ ಬಿಟ್ಟಿರುವುದಾಗಿ ಹೇಳಿದ್ದಾನೆ. 

ಮಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಶಶಿಕಲಾ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಬಾಲಕಿಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು ನಿಂಗಪ್ಪ ಮಗುವನ್ನು ಹತ್ಯೆ ಮಾಡಿರುವ ವಿಚಾರವನ್ನು ಬಯಲಿಗೆಳೆದಿದ್ದಾರೆ. 

ತನಿಖೆ ವೇಳೆ ನಿಂಗಪ್ಪ ಎರಡು ವಿವಾಹವಾಗಿರುವುದು ಕಂಡು ಬಂದಿದ್ದು, ಎರಡನೇ ಮದುವೆಯನ್ನು ಮುಚ್ಚಿಡುವ ಸಲುವಾಗಿ ನಿಂಗಪ್ಪ ಮಗುವನ್ನು ಹತ್ಯೆ ಮಾಡಿದ್ದಾನೆಂಬುದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

3 ತಿಂಗಳ ಮುಂಚೆಯೇ ರಾಮ ಮಂದಿರ ಹಣ ಎಣಿಕೆ ಸಿಬ್ಬಂದಿಗಳ ಕಿತ್ತೊಗೆಯಲು SBI ಶಿಫಾರಸ್ಸು ಮಾಡಿತ್ತು: ವರದಿ

BJP ರಾಜ್ಯ ವಕ್ತಾರ ಎಂಜಿ ಮಹೇಶ್ ಪಕ್ಷದಿಂದ ಉಚ್ಛಾಟನೆ

Arunachal Pradesh: ಭೀಕರ ಗುಡ್ಡ ಕುಸಿತ, ಬೈಕರ್ ಸಮೇತ ಹೊತ್ತೊಯ್ದ ಮಣ್ಣು, ಬದುಕಿದ್ದೇ ಪವಾಡ, Video Viral

ಅವನಿಗೆ ಬದುಕುವ ಹಕ್ಕಿಲ್ಲ: ಎರಡೇ ತಿಂಗಳಲ್ಲಿ ನಸ್ರಾಪುರ ಅಪರಾಧಿಗೆ ಗಲ್ಲು ಶಿಕ್ಷೆ ಸ್ವಾಗತಿಸಿದ ಮಹಾ ಸಿಎಂ ಫಡ್ನವೀಸ್

ರಾಮ ಮಂದಿರ ದೇಣಿಗೆ ವಿವಾದ: 'ಆಕಾಶವೇನು ಕಳಚಿ ಬೀಳಲ್ಲ'; ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ..!