ರಾಜ್ಯ

ವಿಜಯಪುರ: ಪ್ರವಾಹ ಸಂಕಷ್ಟಕ್ಕೆ ಸಿಲುಕ್ಕಿದ್ದ 400 ಕುಟಂಬಗಳನ್ನು ಸ್ಥಳಾಂತರಿಸಿದ ಎನ್'ಡಿಆರ್'ಎಫ್ ಪಡೆ

Manjula VN

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಸಿಂದಗಿ ತಾಲೂಕುಗಳಲ್ಲಿ ಪ್ರವಾಹ ಗಂಭೀರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಪರಿಣಾಮ ಭೀಮ ನದಿ ತೀರ ಪ್ರದೇಶಗಳಲ್ಲಿದ್ದ 400ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಸಕ್ಕೆ ಸ್ಥಳಾಂತರಿಸಲಾಗಿದೆ. 

ಮೊರಟಗಿ, ತಾರಾಪುರ, ಬ್ಯಾಡ್ಗಿಹಾಳಾ, ಕಾಮಸಾಗಿ ಹಾಗೂ ಕಡಾನಿ ಸೇರಿದಂತೆ ಸಂಕಷ್ಟಕ್ಕೆ ಸಿಲುಕಿದ್ದ 15 ಗ್ರಾಮಸ್ಥರನ್ನು ಎನ್'ಡಿಆರ್'ಎಫ್ ಪಡೆಗಳು ಸ್ಥಳಾಂತರ ಮಾಡಿದೆ. 27 ಗ್ರಾಮಗಳು ಪ್ರವಾಹಕ್ಕೆ ಸಿಲುಕಿಕೊಂಡಿದ್ದವು. ಸಿಂಧಗಿಯಲ್ಲಿ 10, ಇಂಡಿಯಲ್ಲಿ 5ಮತ್ತು ಚಡಾಚನ್ ತಾಲ್ಲೂಕುಗಳಲ್ಲಿ ಮೂರು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಒಟ್ಟಾರೆಯಾಗಿ 401 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 1,861 ಜನರಿಗೆ ಪರಿಹಾರ ಕೇಂದ್ರಗಳಲ್ಲಿ ವಸತಿ ಕಲ್ಪಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಯಾವುದೇ ಸಾವು-ನೋವುಗಳಾಗಿಲ್ಲ ಎಂದು ತಿಳಿಸಿದ್ದಾರೆ. 

ಸೊನ್ನಾ ಬ್ಯಾರೇಜ್ ಒಳಹರಿವು ಸಾಕಷ್ಟು ಹೆಚ್ಚಾದ ಕಾರಣ ಎನ್'ಡಿಆರ್'ಎಫ್ ನೆರವು ಪಡೆಯಲಾಗಿತ್ತು. ಯಾವುದೇ ಅವಕಾಶಗಳನ್ನೂ ತೆಗೆದುಕೊಳ್ಳಲದೆ ಪರಿಸ್ಥಿತಿ ನಿಭಾಯಿಸಲು ಸತತ ಪ್ರಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯ ಉಜ್ಜಯಿನಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಭೀಮಾ ನದಿ ನೀರಿನ ಅಪಾಯಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ ಅವರು ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದ್ದಾರೆ. 

SCROLL FOR NEXT