ರಾಜ್ಯ

ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ

Manjula VN

ಮೈಸೂರು: ಮೈಸೂರು ನಗರದಲ್ಲಿ 10 ದಿನಗಳ ದಸರಾ ಉತ್ಸವಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗದಂತೆ ತಡೆಯಲು, ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ಮಾಡಲು ನಗರಪಾಲಿಕೆ ಮೊಬೈಲ್ ತಂಡವೊಂದನ್ನು ರಚಿಸಿದೆ.

ಈಗಾಗಲೇ ನಗರಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆಗೂಡಿ 23 ವಿಭಿನ್ನ ಸ್ಥಳಗಳಲ್ಲಿ ಕೋವಿಡ್‌ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಿದೆ.

ದಸರಾ ಹಬ್ಬ ಪ್ರಯುಕ್ತ ನಗರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೋಗಲಕ್ಷಣವಿಲ್ಲದ ಮತ್ತು ರೋಗಲಕ್ಷಣದ ರೋಗಿಗಳ ಮೇಲೆ ಪರೀಕ್ಷೆಯನ್ನು ನಡೆಸಲು ನಿಗಮವು ಈ ಪ್ರಯತ್ನವನ್ನು ಕೈಗೊಂಡಿದೆ. ಸಾರ್ವಜನಿಕರು ಇದನ್ನು ಉಪಯುಕ್ತವಾಗುವಂತೆ ಬಳಕೆ ಮಾಡಿಕೊಳ್ಳಬೇಕು ಎಂದು ಎಂಸಿಸಿ ಆರೋಗ್ಯ ಅಧಿಕಾರಿ ಡಾ.ಡಿ.ಜಿ.ನಗರಾಜ್ ತಿಳಿಸಿದ್ದಾರೆ.

ವಾಣಿಜ್ಯ ಅಥವಾ ಕೈಗಾರಿಕಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು, ತಮ್ಮ ಸಿಬ್ಬಂದಿಗಳನ್ನು ಕೊರೋನಾ ಪರೀಕ್ಷೆಗೊಳಪಡಿಸಬೇಕೆಂದು ಬಯಸಿದ್ದೇ ಆದರೆ, ಸಂಸ್ಥೆಗಳು ಪಾಲಿಕೆಯನ್ನು ಸಂಪರ್ಕಿಸಬಹುದಾಗಿದೆ. ಪಾಲಿಕೆಗೆ ಮಾಹಿತಿ ನೀಡಿದ ಕೂಡಲೇ ಮೊಬೈಲ್ ಟೀಮ್ ಸ್ಥಳಕ್ಕೆ ಭೇಟಿ ಉಚಿತವಾಗಿ ಪರೀಕ್ಷೆ ನಡೆಸಲಿದೆ ಎಂದಿದ್ದಾರೆ. 

SCROLL FOR NEXT