ರಾಜ್ಯ

ಯಶವಂತಪುರ ಮೆಟ್ರೋ-ರೈಲು ನಿಲ್ದಾಣಗಳ ಸಂಪರ್ಕಕ್ಕೆ ವ್ಯವಸ್ಥೆ

Manjula VN

ಬೆಂಗಳೂರು: ನಗರದ ಯಶವಂತಪುರದಲ್ಲಿನ ರೈಲು ಮತ್ತು ಮೆಟ್ರೋ ನಿಲ್ದಾಣದ ನಡುವೆ ಪ್ರಯಾಣಿಕರಿಗೆ ಬಹುಮಾದರಿ ಸಂಚಾರ ಸೌಲಭ್ಯ ಶೀಘ್ರದಲ್ಲಿಯೇ ದೊರಕಲಿದೆ. 

ಈ ಕುರಿತು ಒಪ್ಪಂದಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮವು ನೈರುತ್ಯ ರೈಲ್ವೇಯೊಂದಿಗೆ ಅ.21ರಂದು ಒಪ್ಪಂದಕ್ಕೆ ಸಹಿ ಹಾಕಿದೆ. 

ಯಶವಂತಪುರವು ನೈರುತ್ಯ ರೈಲ್ವೆಯ ಪ್ರಮುಖ ನಿಲ್ದಾಣ. ಕೈಗಾರಿಕಾ, ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮಧ್ಯೆ ಈ ನಿಲ್ದಾಣವಿದೆ. ಮೆಟ್ರೊ ಮತ್ತು ಈ ನಿಲ್ದಾಣದ ನಡುವೆ ಹೆಚ್ಚು ಜನ ಪ್ರಯಾಣಿಸುತ್ತಾರೆ. ಒಪ್ಪಂದದ ಅನ್ವಯ, ಈ ನಿಲ್ದಾಣಗಳ ನಡುವೆ 82 ಮೀಟರ್‌ ಉದ್ದದ ಹೊಸ ಮೇಲ್ಸೇತುವೆ ನಿರ್ಮಿಸಲಾಗುತ್ತದೆ.

ನೈರುತ್ಯ ರೈಲ್ವೆ ಪ್ಲಾಟ್‌ಫಾರಂ ಮತ್ತು ಮೆಟ್ರೊ ನಿಲ್ದಾಣದೊಳಗೆ ನೇರವಾಗಿ ತಲುಪಲು ಮತ್ತೊಂದು ಮೇಲ್ಸೇತುವೆ ನಿರ್ಮಾಣವು ಸೇರಿದಂತೆ, ಉಭಯ ನಿಲ್ದಾಣಗಳ ನಡುವೆ ತಡೆರಹಿತ ಸಂಚಾರಕ್ಕಾಗಿ ಹಲವು ಕಾಮಗಾರಿಗಳನ್ನು ಉಭಯ ಸಂಸ್ಥೆಗಳು ಕೈಗೆತ್ತಿಕೊಳ್ಳಲಿವೆ.

ಪಾದಚಾರಿ ಮೇಲ್ಸೇತುವೆ ಮತ್ತು ವಾಹನ ನಿಲುಗಡೆ ಸೌಲಭ್ಯಗಳ ವಿನ್ಯಾಸದ ಗುತ್ತಿಗೆಯನ್ನು ಹೈದರಾಬಾದ್‌ನ ಆರ್ವಿ ಸಂಸ್ಥೆಗೆ ಬಿಎಂಆರ್‌ಸಿಎಲ್ ನೀಡಿದೆ. ನೈರುತ್ಯ ರೈಲ್ವೆಯು ಈಗಾಗಲೇ ಇತರೆ ಸೌಲಭ್ಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ.

SCROLL FOR NEXT