ರಾಜ್ಯ

ಆರ್‌.ಆರ್.ನಗರ ಉಪಚುನಾವಣೆ; ಅರೆಸೇನಾ ಪಡೆ ನಿಯೋಜನೆ

Raghavendra Adiga

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 3ರಂದು ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳ ಭದ್ರತೆಯ ಹಿನ್ನೆಲೆಯಲ್ಲಿ ಅರೆಸೇನಾ ಪಡೆಗಳು ಶುಕ್ರವಾರ ನಗರಕ್ಕೆ ಆಗಮಿಸಿವೆ.

ಈ ಕುರಿತು ಬೆಂಗಳೂರು ಉಪ ಆಯುಕ್ತ (ಪಶ್ಚಿಮ ವಿಭಾಗ) ಸಂಜೀವ್ ಎಂ.ಪಾಟೀಲ್‌ ಈ ಮಾಹಿತಿ ನೀಡಿದ್ದು, ನಗರಕ್ಕೆ ಕೇಂದ್ರ ಅರೆಸೇನಾ ಪಡೆ ಆಗಮಿಸಿವೆ. ಒಂದು ತಂಡ ಬೆಂಗಳೂರಿನದ್ದಾಗಿದ್ದು, ಇತರ ತಂಡಗಳು ತಮಿಳುನಾಡು, ತೆಲಂಗಾಣ ಮತ್ತು ಮೈಸೂರಿನಿಂದ ಆಗಮಿಸಿವೆ ಎಂದಿದ್ದಾರೆ.

ಪಶ್ಚಿಮ ವಿಭಾಗದಲ್ಲಿ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಗಳನ್ನು ಕೂಡ ನಿಯೋಜಿಸಲಾಗುವುದು ಎಂದು ಹೇಳಿದರು. 

ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಪರಸ್ಪರರ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪಗಳನ್ನುಮಾಡುವುದರೊಂದಿಗೆ ಆರ್.ಆರ್.ನಗರ ಕ್ಷೇತ್ರದಲ್ಲಿಚುನಾವಣಾ ಕಾವು ತೀವ್ರವಾಗಿದೆ.

ಕಾಂಗ್ರೆಸ್ ನಿಂದ ಬಿಜೆಪಿ ಸೇರಿ ಸ್ಪರ್ಧಿಸುತ್ತಿರುವ ಮುನಿರತ್ನ ಅವರಿಗೆ ಎದುರಾಳಿಯಾಗಿ ಐಎಎಸ್ ಅಧಿಕಾರಿ ದಿವಂಗತ ಡಿಕೆ ರವಿ ಪತ್ನಿ ಎಚ್.ಕುಸುಮಾ ಕಾಂಗ್ರೆಸ್ ನಿಂದ ಕಣದಲ್ಲಿದ್ದಾರೆ. ವಿ ಕೃಷ್ಣಮೂರ್ತಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
 

SCROLL FOR NEXT