ಸಂಗ್ರಹ ಚಿತ್ರ 
ರಾಜ್ಯ

ಮಡಿಕೇರಿ ದಸರಾ ಉತ್ಸವಕ್ಕೆ ಕೊರೊನಾ ಸೂತಕದ ಛಾಯೆ; ಇಂದು ರಾತ್ರಿ ಸಾಂಪ್ರದಾಯಿಕ ಮೆರವಣಿಗೆ

ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿದ್ದ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಕೊರೊನಾ ಸೂತಕದ ಛಾಯೆ ಆವರಿಸಿದೆ. ಸಾಂಪ್ರದಾಯಿಕ ದಸರಾ ಆಚರಣೆಗೆ ಮಡಿಕೇರಿಯಲ್ಲಿ ತಯಾರಿ ನಡೆದಿದ್ದು, ಇಂದು ರಾತ್ರಿ ದಶದೇವಾಲಯಗಳ ಕಿರು ಮಂಟಪಗಳ ಸಾಂಪ್ರದಾಯಿಕ ಮೆರವಣಿಗೆ ನಡೆಯಲಿದೆ.

ಮಡಿಕೇರಿ: ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿದ್ದ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಕೊರೊನಾ ಸೂತಕದ ಛಾಯೆ ಆವರಿಸಿದೆ. ಸಾಂಪ್ರದಾಯಿಕ ದಸರಾ ಆಚರಣೆಗೆ ಮಡಿಕೇರಿಯಲ್ಲಿ ತಯಾರಿ ನಡೆದಿದ್ದು, ಇಂದು ರಾತ್ರಿ ದಶದೇವಾಲಯಗಳ ಕಿರು ಮಂಟಪಗಳ ಸಾಂಪ್ರದಾಯಿಕ ಮೆರವಣಿಗೆ ನಡೆಯಲಿದೆ.

ಶಕ್ತಿದೇವತೆಗಳೂ ಸೇರಿದಂತೆ ಮಡಿಕೇರಿಯ ದಶದೇವಾಲಯಗಳಲ್ಲಿ ಮೆರವಣಿಗೆಗೆ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಅತ್ಯಂತ ಸರಳವಾಗಿ, ಜನರೇ ಸೇರದ ರೀತಿಯಲ್ಲಿ ನಾಡಹಬ್ಬದ ಆಚರಣೆಯಾಗುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಸರಳ ದಸರಾ ಆಚರಿಸುವುದಾಗಿ ದಸರಾ ಸಮಿತಿಯಿಂದ ನಿಧಾ೯ರ ಕೈಗೊಂಡಿದ್ದು, ಸಾವ೯ಜನಿಕರು ಸಹಕರಿಸುವಂತೆ ಸಮಿತಿ ಮನವಿ ಮಾಡಿದೆ.

ಪಿಕ್ ಅಪ್ ವಾಹನದಲ್ಲಿ ಒಂದು ಮೂತಿ೯ಯನ್ನಿಟ್ಟು ಕಳಸದೊಂದಿಗೆ ಬನ್ನಿ ಮಂಟಪಕ್ಕೆ ಇಂದು ರಾತ್ರಿ ಮೆರವಣಿಗೆ ಸಾಗಲಿದೆ. ಆದರೆ ಮಂಟಪಗಳ ಪ್ರದಶ೯ನ ಅಥವಾ ಬಹುಮಾನಗಳ ಸ್ಪಧೆ೯ಯನ್ನು ರದ್ದುಪಡಿಸಲಾಗಿದೆ. ದೇವಾಲಯದ ಮಂಟಪದೊಂದಿಗೆ 20 ಮಂದಿಗೆ ಮಾತ್ರ ತೆರಳಲು ಅವಕಾಶ ಕಲ್ಪಿಸಲಾಗಿದೆ.

ದಸರಾ ಹಿನ್ನಲೆ ಇಂದು ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ಬಂದ್ ಮಾಡಲಾಗಿದ್ದು, ಮಡಿಕೇರಿ ವ್ಯಾಪ್ತಿಯಲ್ಲಿ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಪ್ರತೀ ವಷ೯ ದಸರಾ ದಿನದಂದು ಜನದಟ್ಟಣೆಯಿಂದ ಕಿಕ್ಕಿರಿಯುತ್ತಿದ್ದ ಮಡಿಕೇರಿಯಲ್ಲಿ ಈ ಬಾರಿ ದಸರಾ ಸಂಭ್ರಮವೂ ಇಲ್ಲದೇ ಬಿಕೋ ಎನ್ನುತ್ತಿದೆ. ಕೊರೊನಾ ಸೋಂಕು ವ್ಯಾಪಿಸದಂತೆ ತಡೆಯುವ ಹಿನ್ನೆಲೆ ಮತ್ತು ಜನತೆಯ ಆರೋಗ್ಯ ,ಸುರಕ್ಷತೆ ದೖಷ್ಟಿಯಿಂದ ಈ ಕ್ರಮ ಅನಿವಾಯ೯ ಎಂದು ಸಕಾ೯ರದ ಸಮಥ೯ನೆ ನೀಡಿದೆ. ಮಾಸ್ಕ್ ಧರಿಸುವಿಕೆ ಕಟ್ಟುನಿಟ್ಟಿನ ನಿಯಮ ಜಾರಿಯಾದ ಬಳಿಕ ಕೊಡಗಿನಲ್ಲಿಯೂ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಗಣನೀಯ ಇಳಿಕೆಯಾಗಿದೆ.

ಗೋಣಿಕೊಪ್ಪಲುವಿನಲ್ಲಿಯೂ ಸಾಂಪ್ರದಾಯಿಕ ಪೂಜೆ, ಮೂಲಕ ಸಾಂಕೇತಿಕ ನಾಡಹಬ್ಬ ನಡೆಯುತ್ತಿದೆ.
ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಮಡಿಕೇರಿಯಲ್ಲಿ ರಾಜರ ಕಾಲದಿಂದಲೂ ಕರಗ ಮಹೋತ್ಸವ ನಡೆದು ಬಂದಿದೆ. ದಸರಾ ಆರಂಭದಿಂದ ಕೊನೆಯ ದಿನದವರೆಗೆ ಅಂದರೆ ಒಂಭತ್ತು ದಿನಗಳ ಕಾಲ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರದ ಪ್ರತೀ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಈ ಬಾರಿ ಕೊರೊನಾದಿಂದಾಗಿ ಕರಗೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಇದೇ ವೇಳೆ ದಶಮಂಟಪಗಳ ಅದ್ದೂರಿ ಶೋಭಾಯಾತ್ರೆಯೂ ರದ್ದುಗೊಂಡಿದೆ. ದಶಮಂಟಪಗಳ ಸ್ಥಿರ ಪ್ರದರ್ಶನಕ್ಕೆ‌ ಮಾತ್ರ ಅವಕಾಶ ಕಲ್ಪಿಸಲಾಗಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT