ರಾಜ್ಯ

ಕೊರೋನಾ ಪರೀಕ್ಷೆಯಲ್ಲಿನ ಬೆಳವಣಿಗೆ ದರದಲ್ಲಿನ ಕುಸಿತ, ಸೋಂಕು ಹರಡುವಿಕೆ ತಡೆಗೆ ಸಾಕಾಗದು: ವಿಶ್ಲೇಷಣೆ

Nagaraja AB

ಬೆಂಗಳೂರು: ಕೊರೋನಾ ವೈರಸ್ ಪರೀಕ್ಷೆ ಪ್ರಮಾಣ ಹೆಚ್ಚಾಗುತ್ತಿದ್ದರೂ, ಅದರ ವೇಗ ಅಥವಾ ದರ ಕಡಿಮೆಯಾಗಿದ್ದು, ವೈರಸ್ ಹರಡುವಿಕೆ ತಡೆಯಲು ಸಾಕಾಗುತ್ತಿಲ್ಲ. ಬೆಂಗಳೂರು ಸೇರಿದಂತೆ ಆರು ಮೆಗಾ ನಗರಗಳಲ್ಲಿ ಸಾಪ್ತಾಹಿಕವೊಂದು ನಡೆಸಿದ ವಿಶ್ಲೇಷಣೆಯಲ್ಲಿ ಇದು ಕಂಡುಬಂದಿದೆ. ಪ್ರಾಕ್ಸಿಮಾ ಕನ್ಸಲ್  ಟಿಂಗ್ ಮತ್ತು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಕೈಗೊಂಡ ಕಾರ್ಯಕ್ರಮದಲ್ಲಿ ಜೀವನ್ ರಕ್ಷಾ ವಿಶ್ಲೇಷಿಸಿದೆ.

ಈ ಉದ್ದೇಶಕ್ಕಾಗಿ ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ ಪರೀಕ್ಷೆ ಪ್ರಮಾಣವನ್ನು 234ಕ್ಕೆ ಹೆಚ್ಚಿಸಲಾಯಿತು. ಜುಲೈನಲ್ಲಿ ಅದು 187ಕ್ಕೆ, ಆಗಸ್ಟ್ ನಲ್ಲಿ 169ಕ್ಕೆ ಇಳಿಕೆಯಾಯಿತು. ಸೆಪ್ಟೆಂಬರ್ ನಲ್ಲಿ ಶೇ. 94 ಮತ್ತು ಅಕ್ಟೋಬರ್ ನಲ್ಲಿ ಶೇ. 87 ರಷ್ಟಿದೆ.

ಜನಸಂಖ್ಯೆಯ ಸಂಪೂರ್ಣ ಗಾತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪರೀಕ್ಷೆ ಅಸಮರ್ಪಕವಾಗಿದೆ. ವೈರಸ್ ನಗರದಾದ್ಯಂತ ವ್ಯಾಪಕವಾಗಿ ಮತ್ತು ವೇಗವಾಗಿ ಹರಡುತ್ತಿದೆ. ಒಟ್ಟಾರೆಯಾಗಿ, ಬೆಂಗಳೂರು ನಗರದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 2, 07, 000 ಪರೀಕ್ಷೆಗಳನ್ನು ನಡೆಸಿರುವಂತೆಯೇ ಇದು ಅಸಮಪರ್ಕವಾಗಿದ್ದು, ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಾಕಾಗಿಲ್ಲ ಎನ್ನುತ್ತಾರೆ ಜೀವನ್ ರಕ್ಷಾ ಸಂಘಟಕ ಮೈಸೂರು ಸಂಜೀವ್.

ನಗರದಲ್ಲಿ ಕೊರೋನಾವೈರಸ್ ಹೆಚ್ಚಾಗುತ್ತಿರುವುದನ್ನು ಪಾಸಿಟಿವ್ ದರದಲ್ಲಿ ಗೊತ್ತಾಗುತ್ತಿದೆ. ಸೆಪ್ಟೆಂಬರ್ 19ರಲ್ಲಿ  ನಗರದಲ್ಲಿ ಶೇ. 1.6 ರಷ್ಟು ಜನಸಂಖ್ಯೆ ಸೋಂಕಿತರಿದ್ದರು. ಅದು ಅಕ್ಟೋಬರ್ 24ರ ವೇಳೆಗೆ ಶೇ.2.6ಕ್ಕೆ ಏರಿಕೆಯಾಯಿತು. ಭಾರತದ ಆರು ಮೆಗಾ ನಗರದಲ್ಲಿ ಇದು ಹೆಚ್ಚಾಗಿದೆ. ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ಅಹಮದಾಬಾದ್ ಮತ್ತು ಕಲ್ಕತ್ತಾದಲ್ಲಿ ಒಟ್ಟಾರೇ,  ಶೇ. 8.45 ಕೋಟಿ ಜನಸಂಖ್ಯೆಯಲ್ಲಿ ಶೇ. 1.5 ರಷ್ಟು ಪಾಸಿಟಿವ್ ಹೊಂದಿದ್ದಾರೆ.

ಸಕಾರಾತ್ಮಕ ದೃಷ್ಟಿಯಿಂದ, ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳು 65,000 ದಿಂದ 51,000 ಕ್ಕೆ ಇಳಿದಿವೆ, ಪರೀಕ್ಷೆ ಪ್ರಮಾಣ 14% ರಿಂದ 12.6% ಕ್ಕೆ ಇಳಿದಿದೆ, ಸರಾಸರಿ ದೈನಂದಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಸಾವಿನ ಸಂಖ್ಯೆ ಅಕ್ಟೋಬರ್‌ ತಿಂಗಳ ಶುಕ್ರವಾರದವರೆಗೆ ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ ಸೆಪ್ಟೆಂಬರ್ 12 ರಿಂದ ಸೆಪ್ಟೆಂಬರ್ 19ರವರೆಗೂ ನಡೆಸಿದ ಕೊರೋನಾ ಬೆಳವಣಿಗೆ ದರ ಶೇ. 15 ರಷ್ಟಿತ್ತು. ಆದಾಗ್ಯೂ ಅಕ್ಟೋಬರ್ 17 ರಿಂದ ಅಕ್ಟೋಬರ್ 24ರ ನಡುವಣ ಬೆಳವಣಿಗೆ ದರ ಶೇ.8ಕ್ಕೆ ಇಳಿದಿದೆ. ಏಳು ದಿನಗಳಲ್ಲಿ ಕೊರೋನಾ ಬೆಳವಣಿಗೆ ದರ ಏರಿಕೆ ಹಾಗೂ ಇಳಿಕೆ ಕಂಡುಬಂದಿದೆ.

SCROLL FOR NEXT