ರಾಜ್ಯ

20 ಬಾರಿ ಸಂಚಾರ ನಿಯಮ ಉಲ್ಲಂಘನೆ: 10,000 ರೂ. ದಂಡ ವಸೂಲಿ

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 20 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರನೋರ್ವರಿಂದ ಬರೋಬ್ಬರಿ 10,000 ರೂ ದಂಡ ವಸೂಲಿ ಮಾಡಲಾಗಿದೆ.

ಇಂದು ಸಂಚಾರ ಪೂರ್ವ ವಿಭಾಗದ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರುಣ್ ಅವರು ಸುಮಾರು 20 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ ಸವಾರನಿಂದ ದಂಡ ವಸೂಲಿ ಮಾಡಿದ್ದಾರೆ. ಕೆಎ-53- ಇಜೆಡ್ -0446 ದ್ವಿ-ಚಕ್ರ ವಾಹನದ ಮಾಲೀಕರಿಂದ ರೂ.10,000 ದಂಡ  ಕಟ್ಟಿಸಿಕೊಂಡು, ವಾಹನ ಸವಾರನನ್ನು ಸಂಚಾರ ಅರಿವು ತರಬೇತಿಯನ್ನು ಪಡೆಯಲು ಕಳುಹಿಸಲಾಗಿದೆ. 

ದ್ವಿಚಕ್ರ ವಾಹನ ಸವಾರನಿಗೆ 42,500 ರೂ ದಂಡ
ಇತ್ತ ಮತ್ತೊಂದು ಪ್ರಕರಣದಲ್ಲಿ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ನಗರದ ಸಂಚಾರ ಪೊಲೀಸರು 42,500 ರೂ ದಂಡ ವಿಧಿಸಿದ್ದಾರೆ. ಸವಾರ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ. ಆತನನ್ನು ತಡೆದಿದ್ದ ಮಡಿವಾಳ  ಸಂಚಾದ ಠಾಣೆ ಪಿಎಸ್ಐ ಶಿವರಾಜಕುಮಾರ್ ಅಂಗಡಿ ಅವರು ಹಳೇ ಪ್ರಕರಣಗಳ ತಪಾಸಣೆ ನಡೆಸಿದ್ದರು. ಸವಾರ ಅರುಣ್‌ಕುಮಾರ್ ಇದುವರೆಗೂ 77 ಬಾರಿ ನಿಯಮ ಉಲ್ಲಂಘಿಸಿದ್ದು, ತಪಾಸಣೆ ವೇಳೆ ಗೊತ್ತಾಗಿತ್ತು. ಇನ್‌ಸ್ಪೆಕ್ಟರ್ ನವೀನ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಸವಾರ ಅರುಣ್‌ಕುಮಾರ್ ಅವರಿಗೆ  ಸ್ಥಳದಲ್ಲೇ ದಂಡದ ರಶೀದಿ ನೀಡಿದ್ದಾರೆ. ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.

SCROLL FOR NEXT