ರಾಜ್ಯ

ನಗರದ ರಸ್ತೆಗಳ ಗುಂಡಿ ಮುಚ್ಚಲು 31 ತಂಡ ರಚಿಸಿದ ಬಿಬಿಎಂಪಿ

Shilpa D

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಬೆಂಗಳೂರು ಮಹಾನಗರ ಪಾಲಿಕೆ 31 ತಂಡಗಳನ್ನು ರಚಿಸಿದೆ.

ರಸ್ತೆಗಳಲ್ಲಿನ ಗುಂಡಿಗಳಿಂದಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ತಂಡ ರಚಿಸಲಾಗಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ತಿಳಿಸಿದ್ದಾರೆ.

ನಗರದ ರಸ್ತೆಗಳ ಗುಂಡಿಗಳ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಎಂಜಿನೀಯರ್ ಗಳ ಜೊತೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಗುಂಡಿಗಳನ್ನು ತುಂಬಲು ಟೆಂಡರ್‌ಗಳನ್ನು ವಲಯವಾರು ಎಂದು ಕರೆಯಲಾಗುತ್ತದೆ ಮತ್ತು ಗುತ್ತಿಗೆದಾರರು ಗುಂಡಿಗಳನ್ನು ಮುಚ್ಚಲು ಮತ್ತು ರಸ್ತೆ ರಿಪೇರಿ ಮಾಡಲು ಟಾರ್ ಬಳಸುವ ಬದಲು ಹಾಟ್  ಮಿಕ್ಸ್ ಬಳಸಲು ಸೂಚಿಸಿದ್ದಾರೆ.

ಎಷ್ಟು ಮಿಶ್ರಣ ಬೇಕು ಎಂಬ ಬಗ್ಗೆ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಗುತ್ತಿಗೆದಾರರಿಗೆ ದೋಷದ ಹೊಣೆಗಾರಿಕೆಯ ಅವಧಿಯನ್ನು ಸಹ ನಿಗದಿಪಡಿಸಲಾಗುತ್ತದೆ.

1300 ಕಿಮೀ ರಸ್ತೆಯಲ್ಲಿ ಮುಖ್ಯ ರಸ್ತೆ ಮತ್ತು ಉಪ ರಸ್ತೆ ಹಾಗೂ ಜೊತೆಗೆ ಫುಟ್ ಪಾತ್ ಗಳು ಸೇರಿಕೊಂಡಿವೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಇದರ ಜೊತೆಗೆ ವೈಟ್ ಟಾಪಿಂಗ್ ಮತ್ತು ಟೆಂಡರ್ ಶೂರ್ ಕಾಮಾರಿಗಳು ನಡೆಯುತ್ತಿವೆ, ಬೆಂಗಳೂರು ಜಲ ಮಂಡಳಿ ಮತ್ತು ಬೆಸ್ಕಾಂ ನ ಹಲವು ಕಾಮಗಾರಿಗಳಿಂದಾಗಿ ರಸ್ತೆ ಅಗೆಯಲಾಗುತ್ತಿದೆ, ಇದರಿಂದಾಗಿ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

SCROLL FOR NEXT