ಸಾಂದರ್ಭಿಕ ಚಿತ್ರ 
ರಾಜ್ಯ

ಕನ್ನಡ ಕಲಿಕೆ: ತಂತ್ರಜ್ಞಾನ ಅಳವಡಿಕೆಗೆ ಮುಂದಾದ ರಾಜ್ಯ ಸರ್ಕಾರ, ಇ-ಲರ್ನಿಂಗ್ ಪೋರ್ಟಲ್'ಗೆ ಶೀಘ್ರದಲ್ಲೇ ಚಾಲನೆ

ರಾಜ್ಯಕ್ಕೆ ಬಂದ ಕೂಡಲೇ ಅನ್ಯಭಾಷಿಕರು ಮೊದಲು ಕಲಿಯುವ ಪದ ಕನ್ನಡ ಗೊತ್ತಿಲ್ಲ. ಸಿಲಿಕಾನ್ ಸಿಟಿ ಇವತ್ತು ವಲಸಿಗರ ಊರಾಗಿ ಹೋಗಿದ್ದು, ಉದ್ಯೋಗ ಅರಸಿ ಹೊರ ರಾಜ್ಯಗಳ ಸಾಕಷ್ಟುಜನ ಇಲ್ಲಿಗೆ ಬರುತ್ತಿರುತ್ತಾರೆ. ವಲಸಿಗರು ಕನ್ನಡ ಕಲಿತು ಮಾತನಾಡುತ್ತಿರುವುದು ಖುಷಿ ವಿಚಾರ. ನಾವಿರುವ ಯಾವುದೇ ರಾಜ್ಯದ ನೆಲ, ಜಲ ಗೌರವಿಸಬೇಕಾದದ್ದು ಅದು ಅನಿವಾರ್ಯ ಕೂಡ ಹೌದು...

ಬೆಂಗಳೂರು: ರಾಜ್ಯಕ್ಕೆ ಬಂದ ಕೂಡಲೇ ಅನ್ಯಭಾಷಿಕರು ಮೊದಲು ಕಲಿಯುವ ಪದ ಕನ್ನಡ ಗೊತ್ತಿಲ್ಲ. ಸಿಲಿಕಾನ್ ಸಿಟಿ ಇವತ್ತು ವಲಸಿಗರ ಊರಾಗಿ ಹೋಗಿದ್ದು, ಉದ್ಯೋಗ ಅರಸಿ ಹೊರ ರಾಜ್ಯಗಳ ಸಾಕಷ್ಟುಜನ ಇಲ್ಲಿಗೆ ಬರುತ್ತಿರುತ್ತಾರೆ. ವಲಸಿಗರು ಕನ್ನಡ ಕಲಿತು ಮಾತನಾಡುತ್ತಿರುವುದು ಖುಷಿ ವಿಚಾರ. ನಾವಿರುವ ಯಾವುದೇ ರಾಜ್ಯದ ನೆಲ, ಜಲ ಗೌರವಿಸಬೇಕಾದದ್ದು ಅದು ಅನಿವಾರ್ಯ ಕೂಡ ಹೌದು. ಬಹುತೇಕ ಜನರಿಗೆ ಕನ್ನಡ ಗೊತ್ತಿಲ್ಲ. ಕಲಿಯುವ ಅನಿವಾರ್ಯತೆಯೂ ಕಾಡಿಲ್ಲ. ಕನ್ನಡಿಗರು ಏನೇ ಕೇಳಿದ್ರೂ, ಗೊತ್ತೋ, ಗೊತ್ತಿಲ್ಲದೆಯೋ ಅವರು ‘ಕನ್ನಡ್‌ ಗೊತ್ತಿಲ್ಲ...’ಅಂತಾರೆ. 

ಈ ಪದಗಳನ್ನು ಕೇಳಿದ ಕೂಡಲೇ ಕನ್ನಡಾಭಿಮಾನಗಳು ಮೈ ಉರಿದು ಹೋಗುತ್ತದೆ. ಆದರೆ, ಇಂತಹ ಪರಿಸ್ಥಿತಿಗಳು ದೂರಾಗುವ ಸಮಯ ಹತ್ತಿರ ಬಂದಿದೆ. ಕೊರೋನಾ ಸಾಂಕ್ರಾಮಿಕ ಬಳಿಕ ಆನ್'ಲೈನ್ ಶಿಕ್ಷಣ ಪರಿಣಾಮಕಾರಿ ಪ್ರತೀಯೊಬ್ಬರಿಗೂ ತಿಳಿಯುತ್ತಿದ್ದು, ಇದೀಗ ರಾಜ್ಯ ಸರ್ಕಾರ ಕೂಡ ಕನ್ನಡ ಕಲಿಕೆಗೆ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ. 

ಕನ್ನಡ ಕಲಿಯಲು ಇಚ್ಛಿಸುವ ಜನರು ಇ-ಲರ್ನಿಂಗ್ ಪೋರ್ಟಲ್ ಮೂಲಕ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬರುದಾಗಿದೆ. ಇ-ಕಲಿಕೆ ಪೋರ್ಟಲ್'ಗೆ ನವೆಂಬರ್.1ರ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಚಾಲನೆ ನೀಡಲಿದ್ದಾರೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಉಪಕ್ರಮವು ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರಲ್ಲದವರಿಗೆ ಭಾಷೆಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ವಿದೇಶದಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮುಂದಿನ ಪೀಳಿಗೆಯ ಕನ್ನಡದ ಮೂಲ ಸಂಪರ್ಕ ಕಳೆದುಕೊಳ್ಳದಂತೆಯೂ ಸಹಾಯ ಮಾಡಲಿದೆ. 

ಕನ್ನಡವನ್ನು ಕಲಿಸಲು ರಾಜ್ಯ ಸರ್ಕಾರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ. ಕನ್ನಡ ಪದಗಳನ್ನು ಡಿಜಿಟಲೀಕರಣಗೊಳಿಸಲು ತಜ್ಞರು, ಬರಹಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ, ಕನ್ನಡವನ್ನು ಕಲಿಯಲು ಇಚ್ಛಿಸುವ ಆಸಕ್ತರಿಗೆ ಈ ಪೋರ್ಟಲ್ ಸಹಾಯ ಮಾಡುತ್ತದೆ ಮತ್ತು ಕ್ರಮೇಣ ಓದುವುದು ಮತ್ತು ಬರೆಯುವುದನ್ನೂ ಕೂಡ ಕಲಿಯಬಹುದಾಗಿದೆ. ಮುಂದಿನ ದಿನಗಳಲ್ಲಿ, ವಿಜ್ಞಾನ ವಿಷಯಗಳನ್ನು ಕೂಡ ಕನ್ನಡದಲ್ಲಿ ಪೋರ್ಟಲ್ ಮೂಲಕ ಕಲಿಸಲು ಸರ್ಕಾರ ಚಿಂತನೆ ನಡೆಸಿದೆ.

ಇದು ರಾಜ್ಯ ಸರ್ಕಾರದ ಮೊದಲ ಪ್ರಯತ್ನವಾಗಿದೆ. ಕನ್ನಡಿಗರಲ್ಲದ ಸಾಕಷ್ಟು ಜನರು ಅಧ್ಯಯನ ಮತ್ತು ಕೆಲಸ ಮಾಡಲು ಕರ್ನಾಟಕಕ್ಕೆ ಬರುತ್ತಾರೆ. ಇ-ಪೋರ್ಟಲ್ ಎಲ್ಲಿಯೇ ಇದ್ದರೂ ಭಾಷೆಯನ್ನು ಕಲಿಯಲು ಅಂತಹವರಿಗೆ ಸಹಾಯ ಮಾಡುತ್ತದೆ. ಇದು ಬಳಕೆದಾರ ಸ್ನೇಹಿ ಮತ್ತು ಉಚಿತವಾಗಿರಲಿದೆ ಎಂದು ಅವರು ಹೇಳಿದ್ದಾರೆ. 

ರಾಜ್ಯದ ಹೊರಗೆ ವಿಶೇಷವಾಗಿ ವಿದೇಶದಲ್ಲಿ ವಾಸಿಸುವ ಜನರಿಗೆ ಪೋರ್ಟಲ್ ಸಹಾಯ ಮಾಡುತ್ತದೆ. ವಿದೇಶಗಳಿಗೆ ಹೋದ ಪೋಷಕರಿಗೆ ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಲು ಸೌಲಭ್ಯಗಳಿಲ್ಲದಿದ್ದರೂ ಇ-ಲರ್ನಿಂಗ್ ಪೋರ್ಟಲ್ ಅಂತಹವರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. 

ವಿದೇಶದಲ್ಲಿ ಭಾಷೆಯನ್ನು ಉತ್ತೇಜಿಸಲು ಪ್ರಾಧಿಕಾರವು ಈಗಾಗಲೇ ಮಾಡುತ್ತಿರುವ ಕೆಲಸವನ್ನು ಈ ಉಪಕ್ರಮವು ಮತ್ತಷ್ಟು ಸಹಾಯ ಮಾಡಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಥಳೀಯ ಕನ್ನಡ ಸಂಸ್ಥೆಗಳ ಸಹಯೋಗದೊಂದಿಗೆ ವಿದೇಶಗಳಲ್ಲಿ ವಾರಾಂತ್ಯದ ದಿನಗಳಲ್ಲಿ ತರಗತಿಗಳನ್ನು ನಡೆಸುತ್ತಿದೆ, ಇ-ಲರ್ನಿಂಗ್ ಪೋರ್ಟಲ್ 2ನೇ ತಲೆಮಾರಿನ ಜನರಿಗೆ ಕನ್ನಡ ಕಲಿಯಲು ಸಹಾಯ ಮಾಡಲಿದೆ ಎಂದಿದ್ದಾರೆ. 

ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದಾಗಿನಿಂದ ವಾರಾಂತ್ಯದಲ್ಲಿ ತರಗತಿಗಳನ್ನು ನೀಡುವ ಶಿಕ್ಷಕರಿಗೆ ತರಬೇತಿ ನೀಡಲು ಕೆಡಿಎ 5 ಆನ್‌ಲೈನ್ ಕಾರ್ಯಾಗಾರಗಳನ್ನು ನಡೆಸಿದೆ. ನಾವು 84 ದೇಶಗಳಲ್ಲಿ 300 ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರಿಗೆ ತರಬೇತಿ ನೀಡಿದ್ದೇವೆ. ಅಮೆರಿಕಾದ ಒಂದೆರಡು ಶಾಲೆಗಳು ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ನೀಡುತ್ತಿವೆ. ವಾರಾಂತ್ಯದ ತರಗತಿಗಳಿಗೆ ಹಾಜರಾಗುವ ಮಕ್ಕಳು ನಂತರ ತಮ್ಮ ಶಾಲೆಯಲ್ಲಿ ಕನ್ನಡ ಕಲಿಯುವುದನ್ನು ಮುಂದುವರಿಸಬಹುದು ಎಂದು ನಾಗಾಭರಣ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT