ಹಣವನ್ನು ಜಪ್ತಿ ಮಾಡಿರುವ ಪೊಲೀಸರು 
ರಾಜ್ಯ

ಕೋಲಾರ: ಕಾರಿನಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ ರೂ.2.95 ವಶಕ್ಕೆ ಪಡೆದು, ಸಿನಿಮೀಯ ರೀತಿಯಲ್ಲಿ ಆರೋಪಿಗಳ ಬಂಧಿಸಿದ ಪೊಲೀಸರು

2 ಕಾರುಗಳಲ್ಲಿ ದಾಖಲೆ ರಹಿತವಾಗಿ ರೂ.2.95 ಕೋಟಿ ಸಾಗಿಸುತ್ತಿದ್ದ ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧನಕ್ಕೊಳಪಡಿಸಿ, ಹಣ ಜಪ್ತಿ ಮಾಡಿರುವ ಘಟನೆ ಕೋಲಾರದ ಶ್ರೀನಿವಾರಪುರ ತಾಲೂಕಿನಲ್ಲಿ ಮಂಗಳವಾರ ನಡೆದಿದೆ. 

ಕೋಲಾರ: 2 ಕಾರುಗಳಲ್ಲಿ ದಾಖಲೆ ರಹಿತವಾಗಿ ರೂ.2.95 ಕೋಟಿ ಸಾಗಿಸುತ್ತಿದ್ದ ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧನಕ್ಕೊಳಪಡಿಸಿ, ಹಣ ಜಪ್ತಿ ಮಾಡಿರುವ ಘಟನೆ ಕೋಲಾರದ ಶ್ರೀನಿವಾರಪುರ ತಾಲೂಕಿನಲ್ಲಿ ಮಂಗಳವಾರ ನಡೆದಿದೆ. 

ಆರೋಪಿಗಳು ಶ್ರೀನಿವಾಸಪುರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಈ ಕುರಿತು ಖಚಿತ ಮಾಹಿತಿ ಆಧರಿಸಿ ಕಾರನ್ನು ಚೇಸ್ ಮಾಡಿದ ಪೊಲೀಸರು ಶ್ರೀನಿವಾಸಪುರ ತಾಲೂಕು ರೋಜರಹಳ್ಳಿ ಗ್ರಾಮದ ಗೇಟ್ ಬಳಿ ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಹಣ ಜಪ್ತಿ ಮಾಡಿದ್ದಾರೆಂದು ತಿಳಿದುಬಂದಿದೆ. 

ಶ್ರೀನಿವಾಸಪುರ ಡಿವೈಎಸ್ಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತನಿಖೆ ಮುಂದುವರೆಸಿದ್ದು, ರೂ.2 ಸಾವಿರ ನೋಟುಗಳನ್ನು ರೂ.500ಗೆ ಬದಲಾವಣೆ ಮಾಡಲು ಸಾಗಿಸುತ್ತಿದ್ದ ಬಗ್ಗೆ ಪೊಲೀಸರು ಇದೀಗ ಶಂಕೆ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಭವನಕ್ಕೆ ತೆರಳಿದ ಡಿಕೆ ಶಿವಕುಮಾರ್: ಸಿಎಂ ಆಗಿ ಪ್ರಮಾಣವಚನ, ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ

Karnataka CM News LIVE Updates | ಲೋಕಭವನಕ್ಕೆ ತೆರಳಿದ ಡಿಕೆ ಶಿವಕುಮಾರ್: ಸರ್ಕಾರ ರಚನೆಗೆ ಹಕ್ಕು ಮಂಡನೆ; ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರ ಆಹ್ವಾನ!

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆ ಶಿವಕುಮಾರ್ ಆಯ್ಕೆ; ಶೀಘ್ರದಲ್ಲೇ ರಾಜ್ಯಪಾಲರ ಭೇಟಿ

ಸಾಂಪ್ರದಾಯ ಎಲ್ಲ ನಂಗೆ ಸರಿಹೊಂದಲ್ಲ, ಆ ನಟ ಸೇರಿದಂತೆ ಹಲವರ ಜೊತೆ ಪ್ರೀತಿ-ಸಂಬಂಧ: ನಟಿ Shahana Goswami ಮುಕ್ತ ಹೇಳಿಕೆ

ಪಶ್ಚಿಮ ಬಂಗಾಳದ ಈ ಯೋಜನೆಗೆ ಕೇಂದ್ರದಿಂದ 2,103 ಕೋಟಿ ರೂ ಅನುದಾನ: ಸಿಎಂ Suvendu Adhikari ಮಾಹಿತಿ

SCROLL FOR NEXT