ಸಾಂದರ್ಭಿಕ ಚಿತ್ರ 
ರಾಜ್ಯ

ಕೋವಿಡ್ -19: ಪ್ಲಾಸ್ಮಾ ಚಿಕಿತ್ಸೆ ಪಡೆದ ಶೇ. 60 ರಷ್ಟು ರೋಗಿಗಳು ಗುಣಮುಖ

ತೀವ್ರ ಮತ್ತು ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳಿಗೆ ನೀಡಲಾದ ಪ್ಲಾಸ್ಮಾ ಚಿಕಿತ್ಸೆಯಲ್ಲಿ ಶೇ.60 ರಷ್ಟು  ರೋಗಿಗಳು  ಗುಣಮುಖರಾಗಿದ್ದಾರೆ.

ಬೆಂಗಳೂರು: ತೀವ್ರ ಮತ್ತು ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳಿಗೆ ನೀಡಲಾದ ಪ್ಲಾಸ್ಮಾ ಚಿಕಿತ್ಸೆಯಲ್ಲಿ ಶೇ.60 ರಷ್ಟು  ರೋಗಿಗಳು  ಗುಣಮುಖರಾಗಿದ್ದಾರೆ.ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಡಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಹೆಚ್ ಸಿಜಿ ಆಸ್ಪತ್ರೆಯ ಡಾ. ಯುಎಸ್ ವಿಶಾಲ್ ರಾವ್ 354 ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದ್ದಾರೆ.

ಸಮಗ್ರ ವಿಶ್ಲೇಷಣೆಯನ್ನು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದಾಗ್ಯೂ, ಪ್ರಸ್ತುತ ವಿಶ್ಲೇಷಣೆ ಪ್ರಕಾರ ಶೇ. 60 ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ ಇದೊಂದು ದೊಡ್ಡ ವಿಷಯವಾಗಿದೆ.  ಪ್ಲಾಸ್ಮಾ ಚಿಕಿತ್ಸೆ ವೇಳೆಯಲ್ಲಿ ಇವರಲ್ಲಿ ಶೇ. 90 ರಷ್ಟು ಮಂದಿ ವೆಂಟಿಲೇಟರ್ ನಲ್ಲಿದ್ದರು. ಈವರೆಗೂ 193 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ ಎಂದು ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

ಕೋವಿಡ್-19 ರೋಗದಿಂದ ಗುಣಮುಖರಾದವರಿಂದ ಪ್ಲಾಸ್ಮಾವನ್ನು (ರಕ್ತ) ಪಡೆದು ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ಪಾಸಿಟಿವ್ ರೋಗಿಗಳಿಗೆ ನೀಡಲಾಗುತ್ತದೆ. ಪ್ಲಾಸ್ಮಾದಲ್ಲಿರುವ ರೋಗ ನಿರೋಧಕ ಶಕ್ತಿಯಿಂದ ಕೋರಾನಾ ವಿರುದ್ಧ ಹೋರಾಡಲು ಸಾಧ್ಯವಾಗಲಿದೆ. 24 ಗಂಟೆಯಿಂದ ವಾರದೊಳಗೆ ಇದರ ಫಲಿತಾಂಶವನ್ನು ನಾವು ನೋಡಬಹುದಾಗಿದೆ.

ವೆಂಟಿಲೇಟರ್ ನಲ್ಲಿದ್ದ ರೋಗಿಯೊಬ್ಬರಿಗೆ ರೆಮ್ಡಿಸಿವಿರ್ ನೀಡಿದಾಗ ಯಾವುದೇ ಕೆಲಸ ಮಾಡಲಿಲ್ಲ. ಅವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದ ಬಳಿಕ ಮಾರನೇ ದಿನವೇ ಅವರಿಗೆ ವೆಂಟಿಲೇಟರ್ ತೆಗೆಯಲಾಯಿತು. ಮೂರನೇ ದಿನ ಆಕ್ಸಿಜನ್ ನಿಂದ ಮುಕ್ತಗೊಳಿಸಲಾಯಿತು. ಐದನೇ ದಿನ ಕೋವಿಡ್ ನೆಗೆಟಿವ್ ಬಂದಿತ್ತು. ನಂತರ ಆಸ್ಪತ್ರೆಯಿಂದ ಬಿಡುಗಡೆಗೆ ಸಿದ್ಧರಾದರು ಎಂದು ಡಾ. ರಾವ್ ವಿವರಿಸಿದರು.

ಹೆಚ್ ಸಿಜಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಲಾಗಿದ್ದು, ಪ್ರತಿದಿನ ಇದಕ್ಕಾಗಿ ಸುಮಾರು 20 ಕರೆಗಳು ಬರುತ್ತಿವೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಸುವುದು ಕಷ್ಟಸಾಧ್ಯ.ಪ್ರತಿ ಜಿಲ್ಲೆಯಲ್ಲೂ ಸರ್ಕಾರ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.

ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಫಲಿತಾಂಶ ಮೌಲ್ಯಮಾಪನ ಮಾಡಿ ನಂತರ ಮೂರನೇ ಪ್ರಯೋಗವನ್ನು ಆರಂಭಿಸಲಾಗುವುದು, ಕ್ಲಿನಿಕಲ್ ಪ್ರಯೋಗ ಹೊರತುಪಡಿಸಿದಂತೆ ಆದೇ ಸಂದರ್ಭ 300 ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತದೆ. ಈ ರೀತಿಯ ಗುಣಮುಖದ ಟ್ರೆಂಡಿನ ಮೇಲೆ ನಿಗಾ ವಹಿಸಲಾಗಿದೆ. 60ರಿಂದ 70 ರೋಗಿಗಳು ಐಸಿಯುನಿಂದ ಹೊರಬರುತ್ತಿದ್ದು,  40ರಿಂದ 45 ಜನರು ಬಿಡುಗಡೆಯಾಗುತ್ತಿದ್ದಾರೆ ಎಂದು ಹೆಚ್ ಸಿಜಿ ಆಸ್ಪತ್ರೆಯ ವೈದ್ಯೆ ಡಾ. ಶಾಲಿನಿ
ಠಾಕೂರ್ ತಿಳಿಸಿದ್ದಾರೆ.

ಹೆಚ್ ಸಿಜಿ ಆಸ್ಪತ್ರೆಯಿಂದ ರಾಜ್ಯದ ಇತರ ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಶ್ರೀನಗರ ಮತ್ತು ಆಂಧ್ರಪ್ರದೇಶಗಳಿಗೆ ಪ್ಲಾಸ್ಮಾವನ್ನು ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo ಅವಾಂತರ ತಹಬದಿಗೆ: ಅಡಚಣೆ ಪ್ರಮಾಣ ಇಳಿಕೆ, 'ಮರಳುತ್ತಿದ್ದೇವೆ' ಎಂದ CEO

'ಆಪರೇಷನ್ ಸಿಂಧೂರ' ವೇಳೆ ಭಾರತ 'ಇನ್ನಷ್ಟು ಹಾನಿ ಮಾಡಬಹುದಿತ್ತು': ರಾಜನಾಥ್ ಸಿಂಗ್

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

ತೆಲಂಗಾಣದ ಪ್ರಮುಖ ರಸ್ತೆಗಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್, ಗೂಗಲ್ ಹೆಸರು: ಸರ್ಕಾರಿ ನಿರ್ಧಾರ!

Shocking: ಸಫಾರಿ ತರಬೇತುದಾರನ ಮೇಲೆ ಕರಡಿ ಭೀಕರ ದಾಳಿ, ಬೆಚ್ಚಿಬಿದ್ದ ಪ್ರವಾಸಿಗರು!

SCROLL FOR NEXT