ರಾಜ್ಯ

ನೌಕರಿ ಹಗರಣ: ಬೆಂಗಳೂರು ರೈಲ್ವೆ ವಿಭಾಗದ ಕಿಂಗ್ ಪಿನ್ ಕೆಲಸದಿಂದ ವಜಾ

Shilpa D

ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗವು ತಂತ್ರಜ್ಞನೊಬ್ಬನನ್ನು  ವಜಾಗೊಳಿಸಿರುವುದರ ಜೊತೆಗೆ ಕಳೆದ ತಿಂಗಳು ಬೆಳಕಿಗೆ ಬಂದ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಇತರ ಮೂವರು ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಿದೆ.

ರೈಲ್ವೆಯ ಬೆಂಗಳೂರಿನಲ್ಲಿ ಕ್ಲಾಸ್ ಸಿ ಅಥವಾ ಡಿ ಉದ್ಯೋಗದ ಭರವಸೆ ನೀಡುವ ಮೂಲಕ ಈ ನಾಲ್ವರು 35 ಕ್ಕೂ ಹೆಚ್ಚು ಕುಟುಂಬಗಳನ್ನು ವಂಚಿಸುವ ಮೂಲಕ ಕೋಟಿಯನ್ನು ಸಂಗ್ರಹಿಸಿದ್ದಾರೆ.

ನೌಕರಿಗಾಗಿ ಪ್ರತಿಯೊಬ್ಬರು 4.9 ಲಕ್ಷ ಮತ್ತು 39 ಲಕ್ಷ ರು ವರೆಗೂ ಹಣ ನೀಡಿದ್ದಾರೆ.  ಇವರಲ್ಲಿ ಮೂವರು ಕಳೆದ ತಿಂಗಳು ಸರ್ಕಾರಿ ರೈಲ್ವೆ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿದ್ದಾರೆ.

23 ವರ್ಷಗಳಿಂದ ಕ್ಯಾರೇಜ್ ಮತ್ತು ವರ್ಕ್ಸ್ ವಿಭಾಗದ ತಂತ್ರಜ್ಞ ಆರ್ ಬಾಬು ಎಂಬ ಕಿಂಗ್‌ಪಿನ್ ಅನ್ನು ಸೆಪ್ಟೆಂಬರ್ 1 ರಂದು ವಜಾಗೊಳಿಸಲಾಗಿದೆ.

ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ (ಎಸ್‌ಡಬ್ಲ್ಯುಆರ್‌ಎಂಯು) ನಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಅವರನ್ನು ಕಳೆದ ವಾರ ತಮಿಳುನಾಡಿನ ವೆಲ್ಲೂರು ಅಡಗುತಾಣದಿಂದ  ಬಂಧಿಸಲಾಯಿತು.


ಈ ದಂಧೆಯಲ್ಲಿ ಭಾಗಿಯಾಗಿರುವ ಇತರ ಮೂವರು  ಹಿರಿಯ ತಂತ್ರಜ್ಞ ರಾಜೇಂದ್ರ ಪ್ರಸಾದ್, ತಂತ್ರಜ್ಞ ತಂಗರಾಜ್ ಮತ್ತು ತರಬೇತುದಾರ ಚಮನ್ ಸಿಂಗ್ ಅವರಿಗೆ ಶೋಕಾಸ್  ನೋಟಿಸ್ ನೀಡಲಾಗಿದೆ. 

SCROLL FOR NEXT