ರಾಜ್ಯ

ಮಂಡ್ಯ: ಮನೆ ಬಾಗಿಲಿಗೆ ಬಂದು ಸ್ಯಾಂಪಲ್ ತೆಗೆದು ಕೋವಿಡ್ ತಪಾಸಣೆ

Shilpa D

ಮೈಸೂರು:  ಸಕ್ಕರೆ ನಗರಿ ಮಂಡ್ಯದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಮೂರು ಸಂಖ್ಯೆಗೆ ಏರಿವೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ  ಕೊರೋನಾ ಕೇಸ್ ಹೆಚ್ಚಾಗುತ್ತಿದೆ, ಜಿಲ್ಲಾಡಳಿತ ಮನೆ ಬಾಗಿಲಿಗೆ ಬಂದು ಗಂಟಲಿನ ದ್ರವ ಸಂಗ್ರಹಿಸಿಕೊಂಡು ಹೋಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 2,222 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ಭಾನುವಾರ ಒಂದೇ ದಿನ 230 ಕೇಸ್ ದಾಖಲಾಗಿವೆ, ಅಕ್ಕ ಪಕ್ಕದ ಜಿಲ್ಲೆಗಳಿಂದ ಮಂಡ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ ಎಂದು ಜಿಲ್ಲಾಡಳಿತ ಆರೋಪಿಸಿದೆ. 

ಮೂರು ಮಂದಿಯ ಮೂವತ್ತರೆಡು ತಂಡದ ಆರೋಗ್ಯ ಕಾರ್ಯಕರ್ತರು ನಾಲ್ಕು ತಂಡಗಳೊಂದಿಗೆ ಪ್ರತಿ ತಾಲೂಕಿಗೆ ತೆರಳಿ ಪ್ರತಿದಿನ ವಯಕ್ತಿಕವಾಗಿ 50 ಸ್ಯಾಂಪಲ್ ಸಂಗ್ರಹಿಸುತ್ತಿದ್ದಾರೆ.

ಪ್ರಾಥಮಿಕ ಸಂಪರ್ಕ ಹೊಂದಿರುವವರ ಮಾಹಿತಿ ಪಡೆದು ಅವರಿಂದ ಸ್ಯಾಂಪಲ್ ಸಂಗ್ರಹಿಸಲಾಗುತ್ತಿದೆ. ಪ್ರಾಥಮಿಕ ಸಂಪರ್ಕ ಹೊರತುಪಡಿಸಿ ಹೆಚ್ಚಿನ ಸಮಸ್ಯೆ ಇರುವ ಜನಸಂಖ್ಯೆ ಅಂದರೆ ಕ್ಯಾನ್ಸರ್, ಟಿಬಿ , ಡಯಾಬಿಟೀಸ್ ಮುಂತಾದ 
ಕಾಯಿಲೆಯಿರುವ ರೋಗಿಗಳಿಂದ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ ಎಂದು ಡಿಎಚ್ ಓ ಮಂಚೇಗೌಡ ಹೇಳಿದ್ದಾರೆ. 

ಒಮ್ಮೆ ಆ ಪ್ರದೇಶದಲ್ಲಿ ಸ್ಯಾಂಪಲ್ ಸಂಗ್ರಹಿಸದರೇ ಮುಂದೆ ಜನ ನಮ್ಮ ಮೇಲೆ ಆರೋಪ  ಮಾಡುವ ಆಗಿಲ್ಲ ಎಂದು ಹೇಳಿದ್ದಾರೆ.  ಇನ್ನು ಸುಮಾರು 60 ಮಂದಿ ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.

SCROLL FOR NEXT