ರಾಜ್ಯ

ರೈತರಿಗೆ ಅಗತ್ಯ ರಸಗೊಬ್ಬರ ಪೂರೈಸಲು ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

Shilpa D

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು, ರೈತರು ಮುಂದೇನು ಗತಿ ಎಂದು ಆತಂಕಕ್ಕೀಡಾಗಿದ್ದಾರೆ. ತಕ್ಷಣ ಸರ್ಕಾರ ಆದ್ಯತೆ ಮೇರೆಗೆ ಯೂರಿಯಾ ಆಮದು ಮಾಡಿಕೊಂಡು, ರೈತರಿಗೆ ಅಗತ್ಯ ಪ್ರಮಾಣದಲ್ಲಿ ವಿತರಿಸುವ ಕೆಲಸ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬಿತ್ತನೆ ಸಮಯದಲ್ಲಿ ಸಾಮಾನ್ಯವಾಗಿ 8,50,000 ಮೆಟ್ರಿಕ್ ಟನ್ ಯೂರಿಯಾ ಬೇಕಾಗುತ್ತದೆ, ಸರ್ಕಾರದ ವೆಬ್ ಸೈಟ್ ನಲ್ಲಿ ಮೇ 1ರಿಂದ ಸೆಪ್ಟಂಬರ್ 6ರವರೆಗಗೆ 8,95,221 ಮೆಟ್ರಿಕ್ ಟನ್ ವಿತರಿಸಿರುವುದಾಗಿ ಪ್ರಕಟಿಸಲಾಗಿದೆ. ಇನ್ನು 1,88,996 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಬೇಕಾಗಿದೆ, ಹೀಗಾಗಿ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಸಿಗುತ್ತಿಲ್ಲ, ಅನ್ನದಾತರು ಪ್ರತಿಭಟನೆಗಿಳಿಯುವ ಮುನ್ನವೇ ಸರ್ಕಾರ ಸೂಕ್ತ ಪ್ರಮಾಣದ ರಸಗೊಬ್ಬರ ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.

SCROLL FOR NEXT