ರಾಜ್ಯ

ಆನ್'ಲೈನ್ ಮೂಲಕ ನಿವೇಶನಗಳ ಹರಾಜಿಗೆ ಬಿಡಿಎ ನಿರ್ಧಾರ

Srinivasamurthy VN

ಬೆಂಗಳೂರು: ನಿವೇಶನಗಳ ಮಾರಾಟ ಸಂಖ್ಯೆ ಹೆಚ್ಚಿಸುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇದೀಗ ಆನ್'ಲೈನ್ ಮೊರೆ ಹೋಗಿದೆ. 

ನಗರದಲ್ಲಿ ನಿರ್ಮಾಣವಾಗಿರುವ 1,745 ಫ್ಲ್ಯಾಟ್ ಗಳು ಇನ್ನೂ ಮಾರಾಟವಾಗದೆ ಖಾಲಿಯಾಗಿಯೇ ಉಳಿದಿವೆ. ನಿವೇಶನಗಳನ್ನು ಮಾರಾಟ ಮಾಡಲು ಕೆಲ ತಿಂಗಳ ಹಿಂದೆಯೇ ಬಿಡಿಎ ಮುಂದಾಗಿತ್ತು. ಆದರೆ, ಕೊರೋನಾ ಸಾಂಕ್ರಾಮಿಕ ರೋಗ ಬಿಡಿಎ ನಿರ್ಧಾರಕ್ಕೆ ಭಾರೀ ಹೊಡೆತ ನೀಡಿದೆ. 

ಹೀಗಾಗಿ ನಿವೇಶನಗಳ ಮಾರಾಟಕ್ಕೆ ಆನ್'ಲೈನ್ ಮೊರೆ ಹೋಗಿರುವ ಬಿಡಿಎ, ಆರು ಹಂತಗಳಲ್ಲಿ ನಿವೇಶನ ಮಾರಾಟ ನಡೆಸಲಿದೆ, ಪ್ರತಿ ಹಂತದಲ್ಲಿ 70 ನಿವೇಶನಗಳ ಬಿಡ್ಡಿಂಗ್ ಮುಕ್ತಾಯವಾಗಲಿದೆ. ಹರಾಜಿಗೆ ಇರುವ ಎಲ್ಲಾ ನಿವೇಶನಗಳಿಗೂ ಜಿಯೋ ಮ್ಯಾಪಿಂಗ್ ಅಳವಡಿಸಿ ಪ್ರಾಧಿಕಾರದ ವೆಬ್'ಸೈಟ್ ನಲ್ಲಿ  ಪ್ರಕಟಿಸಲಾಗುತ್ತದೆ. ಅರ್ಜಿದಾರರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಿವೇಶನಗಳನ್ನು ವೀಕ್ಷಿಸಬಹುದು. 

ಕಣ್ಮಣಿಕೆ (II, III & IV ಹಂತ), ಕೊಮ್ಮಘಟ್ಟ (I & II ಹಂತ) ಹಾಗೂ ದೊಡ್ಡನಬಹಳ್ಳಿ (I & II ಹಂತ)ಯಲ್ಲಿರುವ ನಿವೇಶನಗಳು ಇನ್ನೂ ಮಾರಾಟವಾಗಿಲ್ಲ. ಇಲ್ಲಿನ 1, 2 ಮತ್ತು 3 ಬೆಡ್ ರೂಮ್ ಗಳ ಫ್ಲಾಟ್ ಗಳನ್ನು ರೂ.11 ಲಕ್ಷದಿಂದ ರೂ.44 ಲಕ್ಷಕ್ಕೆ ಮಾರಾಟಕ್ಕಿಡಲಾಗಿದೆ. 

ಕೊರೋನಾ ಸೋಂಕು ವ್ಯಾಪಕವಾಗುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಿದೆ. ಹೀಗಾಗಿ ಆನ್'ಲೈನ್ ಮೂಲಕ ನಿವೇಶನ ಹರಾಜು ಮಾಡಲು ನಿರ್ಧರಿಸಲಾಗಿದೆ ಎಂದು ಬಿಡಿಎ ಆಯುಕ್ತ ಹೆಚ್.ಆರ್.ಮಹದೇವ್ ಅವರು ಹೇಳಿದ್ದಾರೆ. 

ಬಹಳ ಹಿಂದೆಯೇ ಆನ್'ಲೈನ್ ಪ್ರಕ್ರಿಯೆ ಆರಂಭಿಸುವ ಕುರಿತು ಚಿಂತನೆ ನಡೆದಿತ್ತು. ಇದೀಗ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಆನ್'ಲೈನ್ ನೀವು ಯಾವುದೇ ವಸ್ತು ಆರ್ಡರ್ ಮಾಡಿದ ಬಳಿಕ ಮುಂದಿನ ದಿನ ನೀವು ಆ ವಸ್ತುವನ್ನು ಪಡೆದುಕೊಳ್ಳುತ್ತೀರಿ. ಆದರೆ, ನೀವಿಲ್ಲಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ  ಕೂಡಲೇ ಫ್ಲ್ಯಾಟ್ ಗಳು ನಿಮ್ಮ ಕೈ ಸೇರಲಿದೆ ಎಂದು ತಿಳಿಸಿದ್ದಾರೆ.

SCROLL FOR NEXT