ರಾಜ್ಯ

ಶಾಲೆಗಳ ಪುನಾರಂಭ: ಕೇಂದ್ರ ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿದ್ದೇವೆ; ಸುರೇಶ್ ಕುಮಾರ್

Shilpa D

ಬೆಂಗಳೂರು: 9 ರಿಂದ 12ನೇ ತರಗತಿ ಮಕ್ಕಳಿಗೆ ಶಾಲೆಯನ್ನು ತೆರೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಶಾಲೆಗಳನ್ನು ಪುನಾರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜ್ಯವು ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನಗಳಿಗಾಗಿ ಕಾಯುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ನಿಯಮಿತವಾಗಿ ವಿದ್ಯಾರ್ಥಿ-ಶಿಕ್ಷಕರ ಸಂವಾದಕ್ಕೆ ವ್ಯವಸ್ಥೆ ಮಾಡುತ್ತಿದೆ.

ಶಾಲಾ ಆವರಣವನ್ನು ಮಾತ್ರ ಬೋಧನೆಗೆ ಬಳಸಲಾಗುತ್ತಿಲ್ಲ, ಆದರೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಂವಹನ ನಡೆಸುತ್ತಿರುವುದು ಕಂಡುಬರುತ್ತದೆ.

ಕೇವಲ 9ರಿಂದ 12ನೇ ತರಗತಿ ಮಾತ್ರವಲ್ಲ ಎಲ್ಲಾ ತರಗತಿ ವಿದ್ಯಾರ್ಥಿಗಳು ವಿದ್ಯಾಗಮದ ಅಡಿಯಲ್ಲಿ ಬರುತ್ತವೆ. ಇದು ಇತರ ರಾಜ್ಯಗಳ ಗಮನವನ್ನು ಸೆಳೆದಿವೆ.

ಶಾಲೆಗಳ ಭಾಗಶಃ ಪುನರಾರಂಭಕ್ಕಾಗಿ ಕೇಂದ್ರವು ಎಸ್‌ಒಪಿ ಯೊಂದಿಗೆ ಬಂದಿದೆ. ಆದರೆ ಯಾವಾಗ ಇದು ಅನುಷ್ಠಾನಗೊಳ್ಳಲಿದೆ ಎಂಬ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲದ ನಿಯಮಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಬೇರೆ ತರಗತಿಗಳಿಗೆ ಕ್ಲಾಸ್ ಆರಂಭಿಸಲು  ಕರ್ನಾಟಕ ಮುಂದಾಳತ್ವ ವಹಿಸಲಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯ ಸರ್ಕಾರ ಯಾವಾಗಲೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ನಡೆಯುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT