ರಾಜ್ಯ

ಕೋವಿಡ್-19 ಅನ್ಲಾಕ್ ಬೆನ್ನಲ್ಲೇ ಬಂಡೀಪುರ, ನಾಗರಹೊಳೆಯತ್ತ ಮುಖ ಮಾಡುತ್ತಿರುವ ಪ್ರವಾಸಿಗರು!

Srinivasamurthy VN

ಮೈಸೂರು: ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ತಳಮಟ್ಟಕ್ಕೆ ಕುಸಿದ್ದ ಪ್ರವಾಸೋಧ್ಯಮ ವಲಯ ಇದೀಗ ಅನ್ಲಾಕ್ 4.0 ಬಳಿಕ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಬಂಡೀಪುರ, ನಾಗರಹೊಳೆ ಪ್ರವಾಸಿಗರು ಮುಖ ಮಾಡುತ್ತಿದ್ದಾರೆ.

ಲಾಕ್‌ಡೌನ್ ನಿಂದಾಗಿ ರಾಜ್ಯದ ಬಹುತೇಕ ಎಲ್ಲ ರಾಷ್ಟ್ರೀಯ ಉದ್ಯಾನವನಗಳಲ್ಲಿನ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಲಾಕ್ ಡೌನ್ ಅನ್ನ ಹಂತಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ಅನ್ಲಾಕ್ 4.0ನಲ್ಲಿ ಪ್ರವಾಸಿತಾಣಗಳನ್ನು ಪ್ರವಾಸಿಗರಿಗೆ ಷರತ್ತು ಮತ್ತು ಕಠಿಣ ಮಾರ್ಗಸೂಚಿಗಳ  ಮೇರೆಗೆ ಮುಕ್ತಗೊಳಿಸಲಾಗುತ್ತಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ನಿರ್ದೇಶನಗಳನ್ನು ಅನುಸರಿಸಿ ರಾಷ್ಟ್ರೀಯ ಉದ್ಯಾನವನಗಳನ್ನು ಪ್ರವಾಸಿಗರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಮುಕ್ತಗೊಳಿಸಲಾಗುತ್ತಿದೆ. 

ಪ್ರಸ್ತುತ ವಾರಾಂತ್ಯದ ವೇಳೆಗೆ ಸುಮಾರು 150 ಪ್ರವಾಸಿಗರು ರಾಷ್ಟ್ರೀಯ ಉಧ್ಯಾನವನ ಭೇಟಿಗೆ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಜೂನ್‌ನಲ್ಲೇ ಉದ್ಯಾನವನಗಳು ಪ್ರವಾಸಿಗರಿಗೆ ತೆರೆದಿತ್ತಾದರೂ, ಜುಲೈನಲ್ಲಿ ಸೋಂಕು ಪ್ರಕರಣಗಳ ಹೆಚ್ಚಳದಿಂದಾಗಿ, ಅವುಗಳನ್ನು ಮತ್ತೆ ಮುಚ್ಚಲಾಯಿತು, ಇದೀಗ ಮತ್ತೆ ರಾಷ್ಟ್ರೀಯ  ಉಧ್ಯಾನವನಗಳ ಸಫಾರಿಗಳನ್ನು ತೆರೆಯಲಾಗಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಂಡೀಪುರ ಟೈಗರ್ ರಿಸರ್ವ್ ನಿರ್ದೇಶಕ ಟಿ.ಬಾಲಚಂದ್ರ ಅವರು, ಕೋವಿಡ್-19 ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಹೆಚ್ಚಿನ ಪ್ರವಾಸಿಗರು ಕಾಣುತ್ತಿದ್ದಾರೆ. ನಾಗರಹೊಳೆ ಭೇಟಿಗೂ ಪ್ರವಾಸಿಗರು ಆನ್ ಲೈನ್ ಬುಕಿಂಗ್ ಮಾಡಲಾಗುತ್ತಿದೆ.  ಎನ್‌ಟಿಸಿಎ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಇದು ಪ್ರವಾಸಿಗರ ಸುರಕ್ಷತೆಯನ್ನು ಖಾತರಿಪಡಿಸುತ್ತದೆ ಎಂದು ನಾಗರಹೊಳೆ ಹುಲಿ ಅಭಯಾರಣ್ಯದ ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ. 

SCROLL FOR NEXT