ಸಂಗ್ರಹ ಚಿತ್ರ 
ರಾಜ್ಯ

ದೂರವಾಣಿ, ಇ-ಮೇಲ್ ಸಂಭಾಷಣೆ ವೇಳೆ ವಕೀಲರಿಂದ ನಿಂದನಾತ್ಮಕ ಭಾಷೆ ಬಳಕೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೇಸರ

ಹೈಕೋರ್ಟ್ ನೌಕರರ ಜೊತೆಗೆ ದೂರವಾಣಿ ಹಾಗೂ ಇ-ಮೇಲ್ ಸಂಭಾಷಣೆ ವೇಳೆ ಕೆಲ ವಕೀಲರು ನಿಂದನಾತ್ಮಕ ಭಾಷೆ ಬಳಕೆ ಮಾಡುತ್ತಿರುವುದಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಹೈಕೋರ್ಟ್ ನೌಕರರ ಜೊತೆಗೆ ದೂರವಾಣಿ ಹಾಗೂ ಇ-ಮೇಲ್ ಸಂಭಾಷಣೆ ವೇಳೆ ಕೆಲ ವಕೀಲರು ನಿಂದನಾತ್ಮಕ ಭಾಷೆ ಬಳಕೆ ಮಾಡುತ್ತಿರುವುದಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ವಿಚಾರಣೆ ಆರಂಭವಾದಾಗ ವಕೀಲ ಜಗದೀಶ್ ಶಾಸ್ತ್ರಿ ವಿರುದ್ಧ ಗರಂ ಆದ ಮುಖ್ಯ ನ್ಯಾಯಮೂರ್ತಿಗಳು, ರಿಜಿಸ್ಟ್ರಾರ್ ಅವರಿಗೆ ಕಳುಹಿಸಿರುವ ಇ-ಮೇಲ್ ಹಾಗೂ ಸಿ.ಜೆ.ಕಚೇರಿ ಕಾರ್ಯದರ್ಶಿ ಜೊತೆ ಮಾತನಾಡುವಾಗ ನಿಂದನಾತ್ಮಕ ಭಾಷಣೆ ಬಳಸಿರುವುದು ಸೂಕ್ತವಲ್ಲ ಎಂದು ಹೇಳಿದರು. 

ಮುಖ್ಯ ನ್ಯಾಯಮೂರ್ತಿಯಾಗಿ ವಕೀಲರು ಸಲ್ಲಿಸಿರುವ ಎಲ್ಲಾ ಮೆಮೊಗಳನ್ನೂ ಓದಿ ತುರ್ತು ಎಂಬಂತಹ ಅರ್ಜಿಗಳನ್ನು ಮಾತ್ರ ವಿಚಾರಣೆಗೆ ತೆಗೆದುಕೊಳ್ಳಲಾಗುತ್ತಿದೆ. ‘ನಾನು ವೈಯಕ್ತಿಕವಾಗಿ 200ರಿಂದ 300 ಇ–ಮೇಲ್‌ಗಳನ್ನು ಪ್ರತಿನಿತ್ಯ ರಾತ್ರಿ 2ರಿಂದ 3 ಗಂಟೆ ತನಕ ಪರಿಶೀಲಿಸುತ್ತಿದ್ದೇನೆ. ಕೆಲವು ವಕೀಲರು ಶೀಘ್ರಗತಿಯಲ್ಲಿ ಉತ್ತರಗಳನ್ನು ನಿರೀಕ್ಷಿಸುತ್ತಿದ್ದಾರೆ. 

1,200 ಸಿಬ್ಬಂದಿಯಲ್ಲಿ 101 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಬೇರೆ ರಾಜ್ಯದ ಹೈಕೋರ್ಟ್‌ಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿ, ನಂತರವೂ ಅಸಮಾಧಾನ ಇದ್ದರೆ ನನ್ನ ವಿರುದ್ಧ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೇ ದೂರು ಸಲ್ಲಿಸಬಹುದು’ ಎಂದರು. ಈ ಸಂದರ್ಭದಲ್ಲಿ ವಕೀಲ ಶಾಸ್ತ್ರಿ ಅವರು ಮುಖ್ಯನ್ಯಾಯಮೂರ್ತಿಗಳ ಬಳಿ ಕ್ಷಮೆ ಕೋರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT