ರಾಜ್ಯ

'ಪುಟ್ಟ ಮಕ್ಕಳಿಗೆ ಪಾಠ ಮಾಡೋದು ಹೇಗೆ?' ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಹೇಳಿಕೊಟ್ಟ ಸಂಪನ್ಮೂಲ ವ್ಯಕ್ತಿ ಜಯಣ್ಣ

Sumana Upadhyaya

ತುಮಕೂರು: ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ ಎನ್ನುತ್ತಾರೆ, ವಿದ್ಯಾರ್ಥಿಗಳಿಗೆ ಚೆನ್ನಾಗಿ ಅರ್ಥವಾಗುವಂತೆ, ಮಕ್ಕಳಿಗೆ ಆಸಕ್ತಿದಾಯಕವಾಗಿ ಪಾಠ ಹೇಳಿಕೊಡಲು ಶಿಕ್ಷಕರಲ್ಲಿ ಕಲೆ ಬೇಕು. ಅದರಲ್ಲೂ ಪುಟ್ಟ ಮಕ್ಕಳಿಗೆ ಪಾಠ ಮಾಡುವುದೆಂದರೆ ಶಿಕ್ಷಕರಿಗೆ ಇನ್ನಷ್ಟು ಸವಾಲು. ಆಟ, ಹಾವ, ಭಾವ-ಅಭಿನಯದ ಮೂಲಕ ಪುಟ್ಟ ಮಕ್ಕಳಿಗೆ ಹೇಳಿ ಕೊಟ್ಟರೆ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ.

ಹೀಗೆ 1ರಿಂದ 3ನೇ ತರಗತಿಯವರೆಗಿನ ಮಕ್ಕಳಿಗೆ ಯಾವ ರೀತಿ ಪಾಠ ಮಾಡಬೇಕೆಂದು ನಿನ್ನೆ ತುಮಕೂರಿನ ಹುಳಿಯಾರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿ ಹೆಚ್ ಜಯಣ್ಣ ಅಭಿನಯ ಮಾಡಿ ತೋರಿಸುವ ಮೂಲಕ ಹೇಳಿಕೊಟ್ಟರು, ಅಜ್ಜಿ ಬಂದಳು ಹಟ್ಟಿಗೆ ಎಂಬ ಪದ್ಯವನ್ನು ಅವರು ಹಾವ ಭಾವದ ಮೂಲಕ ಮಾಡಿ ತೋರಿಸಿದ್ದು ಅದನ್ನು ಶಿಕ್ಷಕರು ಅನುಸರಿಸುತ್ತಿದ್ದುದು ನೋಡಲು ಸೊಗಸಾಗಿದೆ.

SCROLL FOR NEXT