ರಾಜ್ಯ

ಬನ್ನಿಮಂಟಪದವರೆಗೆ ಜಂಬೂ ಸವಾರಿ ಬರದಿದ್ದರೆ ಜಟಕಾ ಬಂಡಿಯಲ್ಲಿ ಚಾಮುಂಡೇಶ್ವರಿ ಮೆರವಣಿಗೆ- ವಾಟಾಳ್ ನಾಗರಾಜ್ 

Nagaraja AB

ಮೈಸೂರು: ನಾಡಹಬ್ಬ ದಸರಾ ಜನರ ಹಬ್ಬವಾಗಬೇಕು. ಮೈಸೂರು ಅರಮನೆಗೆ ಮಾತ್ರ ಸೀಮಿತವಾಗಬಾರದು. ಜಂಬೂ ಸವಾರಿ ಮೆರವಣಿಗೆ ಬನ್ನಿಮಂಟಪದವರೆಗೆ ಸಾಗದಿದ್ದರೆ ಜಟಕಾ ಗಾಡಿಯಲ್ಲಿ ಚಾಮುಂಡೇಶ್ವರಿ ಮೆರವಣಿಗೆ ಮಾಡುತ್ತೇನೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. 

ಮೈಸೂರಿನ ಜಯಚಾಮರಾಜ ವೃತ್ತದಲ್ಲಿ ರಾಜ್ಯ ಸರ್ಕಾರದ ಸರಳ ದಸರಾ ಆಚರಣೆ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ ಅವರು, ನಾಡಹಬ್ಬ ದಸರಾ ಜನರ ಹಬ್ಬವಾಗಬೇಕು. ಮೈಸೂರು ಅರಮನೆಗೆ ಸೀಮಿತವಾಗಿ ದಸರಾ ಆಚರಣೆ ಸಲ್ಲದು. ಕೊರೋನಾ ಸೋಂಕು ನಿಯಂತ್ರಣ ಕ್ರಮಗಳ ನಡುವೆಯು ದಸರಾ ವೈಭವಕ್ಕೆ ಯಾವುದೇ ತೊಂದರೆ ಎದುರಾಗಬಾರದು ಎಂದರು.

ನಾಡಹಬ್ಬ ದಸರಾವನ್ನು ಅದ್ದೂರಿಯಾಗಿಯೇ ಮಾಡಬಹುದು. ಸರಳ ದಸರಾ ಮಾಡಲು ೧೫ ಕೋಟಿ ರೂ ಏಕೆ ಬೇಕು.ಸ್ಥಳೀಯ ಕಲಾವಿದವರ ಮೂಲಕ ನಾಡಿನ ಕಲೆ, ಸಂಸ್ಕೃತಿ ಎತ್ತಿ ಹಿಡಿಯುವ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು. ಸರ್ಕಾರ ದಸರಾ ವೈಭವಕ್ಕೆ ಯಾವುದೇ ಕೊರತೆ ಮಾಡಬಾರದು ಎಂದು ಹೇಳಿದರು.

SCROLL FOR NEXT