ರಾಜ್ಯ

ಕಲಬುರಗಿಯಲ್ಲಿ 300 ಬೆಡ್ ಗಳ ಸುಸಜ್ಜಿತ ಜಯದೇವ ಆಸ್ಪತ್ರೆ ಸ್ಥಾಪನೆ

Shilpa D

ಕಲಬುರಗಿ: ಬೆಂಗಳೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯಂತೆ ಕಲಬುರಗಿಯಲ್ಲಿ ಎಲ್ಲಾ ಸೌಲಭ್ಯವನ್ನುಳ್ಳ ಜಯದೇವ ಆಸ್ಪತ್ರೆ ಸಂಕೀರ್ಣ ಮುಂದಿನ ಮೂರು ವರ್ಷಗಳಲ್ಲಿ   ಸ್ಥಾಪನೆಯಾಗುವುದು.

ಕಲಬುರಗಿಯಲ್ಲಿ 300 ಹಾಸಿಗೆಯುಳ್ಳ ಜಯದೇವ ಆಸ್ಪತ್ರೆಗೆ ಸಿಎಂ ಬಿಎಸ್ ಯಡಿಯೂರಪ್ಪ ಗುರುವಾರ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. 130 ಹಾಸಿಗೆ ಸಾಮರ್ಥ್ಯವಿರುವ ಜಯದೇವ ಆಸ್ಪತ್ರೆ ಮಾರ್ಚ್ 2016 ರಿಂದ ಕಲಬುರಗಿಯ ಗುಲ್ಬರ್ಗಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಕಟ್ಟಡದ ಮೂರನೇ ಮಹಡಿಯಲ್ಲಿ  ಕಾರ್ಯನಿರ್ವಹಿಸುತ್ತಿದೆ.

ಆದರೆ ಅತಿ ಹೆಚ್ಚಿನ ಸಂಖ್ಯೆಯ ರೋಗಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸ್ಥಳದ ಅಭಾವ ಎದುರಾಗಿದೆ. ಆಂಜಿಯೋಗ್ರಾಮ್, ಆಂಜಿಯೋಪ್ಲ್ಯಾಸ್ಟ್ ಮತ್ತು ಇತರ ಚಿಕಿತ್ಸೆಗೆ ಒಳಗಾಗಬೇಕಾದ ರೋಗಿಗಳ ಕಾಯುವ ಅವಧಿಯನ್ನು ಕಡಿಮೆ ಮಾಡಲು, ನಾಲ್ಕು ವಾರಗಳಲ್ಲಿ ಇನ್ನೂ ಒಂದು ಹೊಸ ಕಾರ್ಡಿಯಾಕ್ ಕ್ಯಾಥ್ಲಾಬ್  ಸ್ಥಾಪಿಸಲಾಗುವುದು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ.
 

SCROLL FOR NEXT