ರಾಜ್ಯ

ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ: ಉಡುಪಿಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ

Shilpa D

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಬೇಡಿಕೆ ಗಗನಕ್ಕೇರುತ್ತಿದೆ. ದಿನಕ್ಕೆ ಐದರಿಂದ ಆರು ಸಿಲಿಂಡರ್ ಅಗತ್ಯವಿದ್ದ ಆಸ್ಪತ್ರೆಗಳಿಗೆ ಈಗ ಸುಮಾರು 50 ಸಿಲಿಂಡರ್ ಬೇಕಾಗಿದೆ. 

ಕಡಿಮೆ ಆಮ್ಲಜನಕ  ಮಟ್ಟವನ್ನು ಹೊಂದಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಬೇಡಿಕೆ ಸಹ ಹೆಚ್ಚಾಗುತ್ತಿದೆ.

ಕೊರೋನಾ ಬರುವ ಮುನ್ನ ಆಸ್ಪತ್ರೆಗೆ ದಿನಕ್ಕೆ ಐದರಿಂದ ಐರು ಸಿಲಿಂಡರ್ ಬೇಕಾಗಿತ್ತು ಈಗ ದಿನಕ್ಕೆ 50 ಸಿಲಿಂಡರ್ ಬೇಕಾಗಿದೆ, ಸಿಲಿಂಡರ್ ಅನ್ನು ತುಂಬಿಸಲು 350 ರಿಂದ 500 ರು ಬೇಕಾಗುತ್ತದೆ, ಹೆಚ್ಚಿನ ಸಿಲಿಂಡರ್ ಗಳನ್ನು ಮಂಗಳೂರಿನಲ್ಲಿ ತುಂಬಿಸುತ್ತೇವೆ ಹೀಗಾಗಿ ಸಾಗಣೆ ವೆಚ್ಚ ಕೂಡ ಹೆಚ್ಚು ತಗುಲುತ್ತಿದೆ.

ಜೀವ ಉಳಿಸಲು ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿರುವುದರಿಂದ ಕೈಗಾರಿಕಾ ಘಟಕಗಳಿಗೆ ಪೂರೈಕೆ ನಿಲ್ಲಿಸುವಂತೆ ಉಡುಪಿ ಡಿಸಿ ಜಿ ಜಗದೀಶ್ ಜಿಲ್ಲೆಯ ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆದಾರರಿಗೆ ಸೂಚನೆ ನೀಡಿದ್ದಾರೆ.

ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಲಿಕ್ವಿಡ್ ಘಟಕವಿದ್ದು, 20 ಸಾವಿರ ಲೀಟರ್ ಸಾಮರ್ಥ್ಯವಿದೆ,  ಸಿಲಿಂಡರ್‌ಗಳನ್ನು ಬ್ಯಾಕ್-ಅಪ್ ಆಗಿ ಮತ್ತು ಕೇಂದ್ರೀಕೃತ ಆಮ್ಲಜನಕ ಪೂರೈಕೆ ಇಲ್ಲದ ವಾರ್ಡ್‌ಗಳಲ್ಲಿ ಬಳಸಲಾಗುತ್ತದೆ,

ಉಡುಪಿಯ ಅಜ್ಜರ್ ಕಡ್ ನಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕವಿಲ್ಲ, ಪ್ರತಿದಿನ ಆಸ್ಪತ್ರೆಗೆ 15 ಆಕ್ಸಿಜನ್ ಸಿಲಿಂಡರ್ ಪೂರೈಸಲಾಗುತ್ತಿತ್ತು, ಆದರೆ ಸದ್ಯ ದಿನಕ್ಕೆ 50 ಆಕ್ಸಿಜನ್ ಸಿಲಂಡರ್ ಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲಾಸ್ಪತ್ರೆ ಪಕ್ಕದಲ್ಲಿ 6ಸಾವಿರ ಲೀಟರ್ ಸಾಮರ್ಥ್ಯದ  ಲಿಕ್ವಿಡ್ ಆಕ್ಸಿಜನ್ ಘಟಕ ಸ್ಥಾಪಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ, ಇನ್ನೆರಡು ವಾರದಲ್ಲಿ ಸ್ಥಾಪನೆಯಾಗಲಿದೆ.

SCROLL FOR NEXT