ಸಾಂದರ್ಭಿಕ ಚಿತ್ರ 
ರಾಜ್ಯ

ಡ್ರಗ್ ಕೇಸ್: 28 ಕಲಾವಿದರು 13 ರಾಜಕಾರಣಿಗಳ ಮಕ್ಕಳಿಗೆ ಸಿಸಿಬಿ ನೋಟಿಸ್?

ಇನ್ನೂ ಹೆಚ್ಚಿನ ಕಲಾವಿದರು ಮತ್ತು ರಾಜಕಾರಣಿಗಳ ಪುತ್ರರು ಡ್ರಗ್ ಕೇಸ್ ನಲ್ಲಿ ಭಾಗಿಯಾಗಿದ್ದು ಸಿಸಿಬಿ ಪೊಲೀಸರು ಭಾನುವಾರ ಅವರಿಗೆಲ್ಲಾ ನೋಟಿಸ್ ನೀಡಲಿದ್ದಾರೆ.

ಬೆಂಗಳೂರು: ಇನ್ನೂ ಹೆಚ್ಚಿನ ಕಲಾವಿದರು ಮತ್ತು ರಾಜಕಾರಣಿಗಳ ಪುತ್ರರು ಡ್ರಗ್ ಕೇಸ್ ನಲ್ಲಿ ಭಾಗಿಯಾಗಿದ್ದು ಸಿಸಿಬಿ ಪೊಲೀಸರು ಭಾನುವಾರ ಅವರಿಗೆಲ್ಲಾ ನೋಟಿಸ್ ನೀಡಲಿದ್ದಾರೆ.

ಕೊರೋನಾ ಕಾರಣದಿಂದಾಗಿ ಕೇವಲ ಕೆಲವು ನಟ ನಟಿಯರನ್ನು ವಿಚಾರಣೆಗೆ ಕರೆ ನೀಡಿದ್ದೇವೆ, ಕನಿಷ್ಠ ಪಕ್ಷ 28 ಕಲಾವಿದರು ಮತ್ತು 13 ರಾಜಕಾರಣಿಗಳ ಪುತ್ರರು ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ವಿಚಾರಣೆಗೆ ಹಾಜರಾಗಿದ್ದ ಸಂತೋಷ್ ಮತ್ತು ಅಕುಲ್ ಬಾಲಾಜಿ ಹಾಗೂ ಆರ್ ವಿ ಯುವರಾಜ್ ಅವರಿಂದ ಅನೇಕ ಮಾಹಿತಿ ಕಲೆ ಹಾಕಿದ್ದು, ಅವರು ಕೆಲವು ವಿಡಿಯೋ ಮತ್ತು ಸಿಸಿಟಿವಿ ಫೂಟೇಜ್ ನೀಡಿದ್ದಾರೆ. ಅದರಲ್ಲಿ ಕೆಲವು ಕಲಾವಿದರು ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ, ಹೀಗಾಗಿ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಸಿಸಿಬಿ ಕಚೇರಿಯಿಂದ ವಿಚಾರಣೆ ಮುಗಿಸಿ ಹೊರಬಂದ ಯುವರಾಜ್ ಅವರನ್ನು ಮಾತನಾಡಿಸಲು ಮಾಧ್ಯಮಗಳು ಪ್ರಯತ್ನ ನಡೆಸಿದರು, ಆದರೆ ಅವರ ಬೆಂಬಲಿಗರು ಯುವರಾಜ್ ಅವರನ್ನು ಸುತ್ತುವರಿದು ಕ್ಯಾಮೆರಾಮ್ಯಾನ್ ಮತ್ತು ವರದಿಗಾರರನ್ನು ನೂಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ