ವಿದ್ಯುತ್ ಸ್ಪರ್ಶದಿಂದ ಹಸು ಮೇಯಿಸುತ್ತಿದ್ದ ವೃದ್ಧ ಸಾವು 
ರಾಜ್ಯ

ವಿದ್ಯುತ್ ಸ್ಪರ್ಶದಿಂದ ಹಸು ಮೇಯಿಸುತ್ತಿದ್ದ ವೃದ್ಧ ಸಾವು

ವಿದ್ಯುತ್ ಪ್ರವಹಿಸಿ ಹಸು ಮೇಯಿಸುತ್ತಿದ್ದ ವೃದ್ಧನೋರ್ವ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ: ವಿದ್ಯುತ್ ಪ್ರವಹಿಸಿ ಹಸು ಮೇಯಿಸುತ್ತಿದ್ದ ವೃದ್ಧನೋರ್ವ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಸವಣ್ಣ(69 ವರ್ಷ) ಮೃತ ದುರ್ದೈವಿ. ಹಸುಗಳನ್ನು ಮೇಯಿಸುವ ವೇಳೆ ರಾಸುಗಳು ಬೇರೊಂದು ಜಮೀನಿಗೆ ಮೇಯಲು ನುಗ್ಗಿವೆ. ಆಗ ಬೆಳೆ ಹಾಳಾದೀತು ಎಂದು ಬಸವಣ್ಣ ಹಸುಗಳನ್ನು ದೂರ ಅಟ್ಟಲು ಜಮೀನಿಗೆ ನುಗ್ಗಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಅಸುನೀಗಿದ್ದಾರೆ ಎನ್ನಲಾಗಿದೆ.  

ಹಸುಗಳು ಮೇಯ್ದುಕೊಂಡು ಸಂಜೆ ಮನೆಗೆ ಬಂದರೂ ಬಸವಣ್ಣ ಬರದಿರುವುದರ ಬಗ್ಗೆ ಸಂಬಂಧಿಕರು ತಡಕಾಡಿದ ವೇಳೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಗೊಳಿಪುರ ನಂದೀಶ ಎಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!