ರಾಜ್ಯ

ಬೆಂಗಳೂರು: 32 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರನಿಗೆ ಬಿತ್ತು 15,000 ರೂ. ದಂಡ!

Vishwanath S

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 32 ಬಾರಿ ಸಂಚಾರ ನಿಯಮ ಉಲ್ಲಂಘಿಸಿದಕ್ಕಾಗಿ ದ್ವಿಚಕ್ರ ವಾಹನ ಮಾಲೀಕನಿಂದ ಸಂಚಾರಿ ಪೊಲೀಸರು ಬರೊಬ್ಬರಿ 15,000 ರೂ. ದಂಡ ವಸೂಲಿ ಮಾಡಿದ್ದಾರೆ.

ಆಡುಗೋಡಿ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್  ನಂಜುಂಡಯ್ಯ ಅವರು ವಾಹನ ಮಾಲೀಕನಿಂದ ದಂಡ ವಸೂಲಿ ಮಾಡಿದ್ದಾರೆ.

ನಗರದಲ್ಲಿ ಸುಮಾರು 32 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಕೆಎ-51-ಹೆಚ್ ಕೆ -3007 ದ್ವಿ-ಚಕ್ರ ವಾಹನದ ಮಾಲೀಕರಿಂದ ಬರೊಬ್ಬರಿ ಅವರು 15,000 ದಂಡ ವಸೂಲಿ ಮಾಡಿದ್ದಾರೆ‌.

SCROLL FOR NEXT