ರಾಜ್ಯ

ಡ್ರಗ್ಸ್ ಪ್ರಕರಣದ ತನಿಖೆ ಮಾಹಿತಿ ಸೋರಿಕೆ: ಸಿಸಿಬಿ ಅಧಿಕಾರಿ, ಮುಖ್ಯ ಪೇದೆ ಅಮಾನತು 

Nagaraja AB

ಬೆಂಗಳೂರು: ಚಂದನವನಕ್ಕೆ ಮಾದಕ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿನ ಮಾಹಿತಿಗಳನ್ನು ಆರೋಪಿಗಳಿಗೆ ಸೋರಿಕೆ ಮಾಡಿದ ಆರೋಪದಡಿ ಸಿಸಿಬಿ ಅಧಿಕಾರಿ ಹಾಗೂ ಮುಖ್ಯಪೇದೆಯನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಎಂ ಆರ್ ಮುದವಿ ಹಾಗೂ  ಅವರಿಗೆ ಸಹಕರಿಸಿದ ಮುಖ್ಯ ಪೇದೆ ಮಲ್ಲಿಕಾರ್ಜುನ್ ಅವರನ್ನು ಅಮಾನತು ಗೊಳಿಸಲಾಗಿದೆ. 

ಬಂಧಿತ ಆರೋಪಿ ವಿರೇನ್ ಖನ್ನಾ ಬಳಿ 50 ಲಕ್ಷಕ್ಕೆ ಡೀಲ್ ಕುದುರಿಸಿದ್ದ ಎಸಿಪಿ ಮುದವಿ ಅವರು ಪೇದೆ ಮಲ್ಲಿಕಾರ್ಜುನ ಮೂಲಕ ಖನ್ನಾಗೆ ಮೊಬೈಲ್ ನೀಡಿ ಸಹಕರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.ಎಸಿಪಿ ಮುದವಿ ರಾತ್ರಿ 10:30 ರ ನಂತರ ಮೊಬೈಲ್ ಕೊಟ್ಟು ಡೀಲ್  ಕುದುರಿಸಿದ್ದರು ಎನ್ನಲಾಗಿದೆ.

SCROLL FOR NEXT