ರಾಜ್ಯ

ರಾತ್ರಿ ವೇಳೆ ಬಾರ್‌, ಕ್ಲಬ್‌ಗಳಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶ ನೀಡುವ ಮಸೂದೆ ಮಂಡಿಸಿದ ಶಿವರಾಂ ಹೆಬ್ಬಾರ್

Lingaraj Badiger

ಬೆಂಗಳೂರು: ರಾತ್ರಿ ವೇಳೆ ಬಾರ್‌ ಮತ್ತು ಕ್ಲಬ್‌ಗಳಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶ ನೀಡಲಾಗಿದ್ದು, ಎಲ್ಲಿ ಯಾವಾಗ ದುಡಿಯಬೇಕು ಎಂಬ ಆಯ್ಕೆ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಸೇರಿದ್ದು ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್ ಅವರು ಬುಧವಾರ ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ(ತಿದ್ದುಪಡಿ)ವಿಧೇಯಕ, 2020 ಮಂಡನೆ ಚರ್ಚೆಯ ವೇಳೆ
ಸಚಿವ ಶಿವರಾಮ್ ಹೆಬ್ಬಾರ್, ಇದು ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಜಾರಿಗೆ ತಂದಿರುವ ವಿಧೇಯಕ ಎಂದರು.

ಐಟಿ-ಬಿಟಿ ಮಾಲ್‌ಗಳಲ್ಲಿ ರಾತ್ರಿ ವೇಳೆ ಮಹಿಳೆಯರು ದುಡಿಯುತ್ತಿದ್ದು, ಇನ್ನು ಮುಂದೆ ಅಂಗಡಿಗಳಲ್ಲಿಯೂ ದುಡಿಯಬಹುದು. ರಾತ್ರಿ ವೇಳೆ ದುಡಿಯುವ ಮಹಿಳೆ ವಾಹನ ಹತ್ತಿದಾಗ ಆಕೆಯನ್ನು ಮೊದಲ ಪ್ರಯಾಣಿಕಳಾಗಿ ಹತ್ತಿಸಬಾರದು ಮತ್ತು ಕೊನೆಯದಾಗಿ ಇಳಿಸಬಾರದು ಎಂದರು.

ಇದಕ್ಕು ಮುನ್ನ ವಿಧಾನಸಭೆಯಿಂದ ಅಂಗೀಕಾರ ಪಡೆದಿರುವ 2020ನೇ ಸಾಲಿನ "ಕರ್ನಾಟಕ ರೇಸ್‌ ಕೋರ್ಸ್‌ಗಳಿಗೆ ಪರವಾನಿಗೆ ನೀಡುವ(ತಿದ್ದುಪಡಿ)ವಿಧೇಯಕವನ್ನು ಮಂಡಿಸಲಾಯಿತು. ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಮಾಧುಸ್ವಾಮಿ ಅವರು ವಿಧೇಯಕವನ್ನು ಮಂಡಿಸಿದರು. ಬಳಿಕ ಮಸೂದೆ ಕುರಿತು ವಿಸ್ತೃತ ಚರ್ಚೆ ನಡೆಯಿತು.

SCROLL FOR NEXT